ವೈದ್ಯರ ನಿರ್ಲಕ್ಷ್ಯದಿಂದಾಗಿ ಹೊಟ್ಟೆಯಲ್ಲಿಯೇ ಕಂದಮ್ಮ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಇಲ್ಲಿನ ಸರ್ಕಾರಿ ಹಳೆ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ.
ದಾವಣಗೆರೆ (ಮಾ. 11): ವೈದ್ಯರ ನಿರ್ಲಕ್ಷ್ಯದಿಂದಾಗಿ ಹೊಟ್ಟೆಯಲ್ಲಿಯೇ ಕಂದಮ್ಮ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಇಲ್ಲಿನ ಸರ್ಕಾರಿ ಹಳೆ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ.
ತ್ಯಾವಣಗಿಯ ರೇಣುಕಾ ವೈದ್ಯರ ನಿರ್ಲಕ್ಷ್ಯಕ್ಕೊಳಗಾದ ಗರ್ಭಿಣಿ. ಹೆರಿಗೆಗಾಗಿ ಶನಿವಾರ ಮಧ್ಯಾಹ್ನವೇ ರೇಣುಕಾ ಆಸ್ಪತ್ರೆಗೆ ದಾಖಲಾಗಿದ್ದರು. ಒಂದೂವರೆ ದಿನ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದರೂ ಹೆರಿಗೆ ಮಾಡದ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಬಳಿಕ ಭಾನುವಾರ ಸಂಜೆ ಕೊನೆಗೂ ಸಿಜೇರಿಯನ್ ಮಾಡಿ ಶಿಶುವನ್ನು ಹೊರ ತೆಗೆದಿದ್ದಾರೆ. ಅಷ್ಟೊತ್ತಿಗಾಗಲೇ ಶಿಶು ಹೊಟ್ಟೆಯಲ್ಲೇ ಮೃತಪಟ್ಟಿತ್ತು.
ವೈದ್ಯರ ಬೇಜವಾಬ್ದಾರಿಗೆ ರೇಣುಕಾ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆರಿಗೆ ಮಾಡದ ವೈದ್ಯರ ವಿರುದ್ಧ ಆಸ್ಪತ್ರೆ ಅಧೀಕ್ಷಕರಿಗೆ ದೂರು ನೀಡಲಾಗಿದೆ. ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
