ನಾನು ಪತ್ರಕರ್ತ, ನೀವು ಪತ್ರಕರ್ತರು, ಯಾರು ಏನು ಹೇಳುತ್ತಾರೆ ಅದನ್ನು ಮಾತ್ರ ನೀವು ರಿಪೋರ್ಟ್ ಮಾಡಬೇಕು. ಆದರೆ ಇಂದ್ರಜೀತ್ ಗಳಗಳ ಆತ್ತುಬಿಟ್ಟ, ಕುಸಿದು ಬಿದ್ದ ಅಂತಾ ನೀವು ವರದಿ ಮಾಡಿದ್ದು ನನ್ನ ಮನಸ್ಸಿಗೆ ನೋವಾಗಿದೆ. ಈಗಾಗಲೇ ಅಕ್ಕನ ಸಾವಿನಿಂದ ನೋವಾಗಿದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಬೆಂಗಳೂರು (ಸೆ.14): ನಾನು ಪತ್ರಕರ್ತ, ನೀವು ಪತ್ರಕರ್ತರು, ಯಾರು ಏನು ಹೇಳುತ್ತಾರೆ ಅದನ್ನು ಮಾತ್ರ ನೀವು ರಿಪೋರ್ಟ್ ಮಾಡಬೇಕು. ಆದರೆ ಇಂದ್ರಜೀತ್ ಗಳಗಳ ಆತ್ತುಬಿಟ್ಟ, ಕುಸಿದು ಬಿದ್ದ ಅಂತಾ ನೀವು ವರದಿ ಮಾಡಿದ್ದು ನನ್ನ ಮನಸ್ಸಿಗೆ ನೋವಾಗಿದೆ. ಈಗಾಗಲೇ ಅಕ್ಕನ ಸಾವಿನಿಂದ ನೋವಾಗಿದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಅಕ್ಕನ ಕೊಲೆಯನ್ನ ನಾವು ಖಂಡಿಸುತ್ತೇವೆ. ವಿಚಾರಣೆಗೆ ನಾನು, ಅಕ್ಕ, ಅಮ್ಮ ಮೂರು ಜನರೂ ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ಈ ವೇಳೆ ಅಕ್ಕನ ಪೂರ್ವಾಪರ ಕೇಳಿದರು. ಅಲ್ಲಿ ನಾನು ಕುಸಿದು ಬಿದ್ದೆ ಅನ್ನೋದೆಲ್ಲಾ ಸುಳ್ಳು. ನಾನು ಒಬ್ಬ ಪತ್ರಕರ್ತ ಸಮಯ ಬಂದಾಗ ಹೇಳ್ತೀನಿ. ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಅಂತಾ ಗೊತ್ತು. ನಾನು ಡಿಫಾಮೇಶನ್ ಕೇಸ್ ಹಾಕಬಹುದು. ಆದರೆ ಹಾಕಲ್ಲ. ಹಾಕಿದರೆ ನಾವುಗಳೇ ಕಿತ್ತಾಡಿದ ಆಗೇ ಆಗುತ್ತದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಸೈದ್ಧಾಂತಿಕ ವಿಚಾರವಾಗಿ 14 ವರ್ಷದ ಹಿಂದೆಯೇ ನಾವು ಬೇರೆ ಬೇರೆಯಾದೆವು. ಆದರೆ ಆಮೇಲೆ ನಾವು ಮಾತನಾಡಿಲ್ಲ. ನಮ್ಮಿಬ್ಬರ ಮಧ್ಯೆ ವೈಯಕ್ತಿಕ ಸಮಸ್ಯೆಗಳಿರಲಿಲ್ಲ. ನನ್ನ ಮಕ್ಕಳು, ನನ್ನ ಹೆಂಡತಿ ಹುಟ್ಟುಹಬ್ಬದಲ್ಲಿ ಸೇರುತ್ತಿದ್ದೆವು. ಹುಟ್ಟುಹಬ್ಬವನ್ನು ಅವಳೇ ಅರೆಂಜ್ ಮಾಡುತ್ತಿದ್ದಳು. ಒಬ್ಬ ತಮ್ಮ ಮತ್ತು ಅಕ್ಕನ ಬಗ್ಗೆ ಯಾರು ಅಪಪ್ರಚಾರ ಮಾಡಬಾರದು. ಪ್ರಕರಣದ ತನಿಖೆಯನ್ನು ಬಿರುಸಿನಿಂದ ಮಾಡುತ್ತಿದ್ದಾರೆ. ನಾವು ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ ಎಂದು ಇಂದ್ರಜಿತ್ ಹೇಳಿದ್ದಾರೆ.
