18000 ಅಡಿ ಎತ್ತರದಲ್ಲಿ ಯೋಧರ ಯೋಗ ತಾಲೀಮು| ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಹಿಮದ ಗಡ್ಡೆಯಿಂದಲೇ ಆವೃತವಾದ 18000 ಅಡಿ ಎತ್ತರದಲ್ಲಿರುವ ಜಮ್ಮು-ಕಾಶ್ಮೀರದ ಲಡಾಖ್‌ನಲ್ಲಿಯೂ ಇಂಡೋ-ಟಿಬೆಟನ್‌ ಗಡಿ ಪೊಲೀಸ್‌(ಐಟಿಬಿಪಿ) ಯೋಧರು ಭರ್ಜರಿ ಸಿದ್ಧತೆ 

ನವದೆಹಲಿ[ಜೂ.17]: ಜೂ.21ರಂದು ವಿಶ್ವಾದ್ಯಂತ ನಡೆಯಲಿರುವ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಹಿಮದ ಗಡ್ಡೆಯಿಂದಲೇ ಆವೃತವಾದ 18000 ಅಡಿ ಎತ್ತರದಲ್ಲಿರುವ ಜಮ್ಮು-ಕಾಶ್ಮೀರದ ಲಡಾಖ್‌ನಲ್ಲಿಯೂ ಇಂಡೋ-ಟಿಬೆಟನ್‌ ಗಡಿ ಪೊಲೀಸ್‌(ಐಟಿಬಿಪಿ) ಯೋಧರು ಭರ್ಜರಿ ಸಿದ್ಧತೆ ನಡೆಸಿದ್ದಾರೆ.

ಹಿಮದ ಗಡ್ಡೆಯಿಂದಲೇ ಆವೃತವಾಗಿದ್ದರಿಂದ ತೀವ್ರ ಕೊರೆಯುವ ಚಳಿಯಲ್ಲೇ ಐಟಿಬಿಪಿ ಯೋಧರು ಸೂರ್ಯ ನಮಸ್ಕಾರ, ಪ್ರಾಣಯಾಮ ಹಾಗೂ ಧ್ಯಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿವೆ. ಕೊರೆಯುವ ಚಳಿಯಲ್ಲೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಲಡಾಕ್‌ನ 18000 ಅಡಿ ಎತ್ತರದಲ್ಲಿ ನಡೆಸಲಾಗುತ್ತಿರುವ ಸಿದ್ಧತೆ ಕುರಿತಾದ ಫೋಟೋಗಳನ್ನು ಐಟಿಬಿಪಿ ಟ್ವಿಟರ್‌ ಖಾತೆ ಮೂಲಕ ಹಂಚಿಕೊಂಡಿದೆ.

Scroll to load tweet…

ಹೃದಯಕ್ಕಾಗಿ ಯೋಗ ಎಂಬುದು ಈ ಬಾರಿಯ ಯೋಗ ದಿನಾಚರಣೆಯ ದ್ಯೇಯೋದ್ದೇಶವಾಗಿದ್ದು, ಜೂ.5ರಿಂದಲೇ ಯೋಗಾಸನಗಳ ಎನಿಮೇಟೆಡ್‌ ವಿಡಿಯೋಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡುತ್ತಿದ್ದಾರೆ.