ರಾಜ್ಯ ಸರ್ಕಾರದ ಒತ್ತಾಸೆಯ ಮೇರೆಗೆ ಜಾರಿಗೊ ಳಿಸಲು ಮುಂದಾಗಿರುವ ಈ ಯೋಜನೆ ಅನ್ವಯ ಬಿಎಂಟಿಸಿಯು ಬಿಪಿಎಲ್ ಕಾರ್ಡ್ದಾರರಿಗೆ ಕೇವಲ 500 ರು.ಗೆ ಮಾಸಿಕ ಬಸ್ ಪಾಸ್ ನೀಡಲಿದೆ ಹಾಗೂ ಇದರಿಂದ ನಿಗಮದ ಮೇಲಾಗುವ ಹೊರೆಯನ್ನು ನೀಗಿಸಲು ಸರ್ಕಾರ ವಿಶೇಷ ಅನುದಾನವನ್ನು ನೀಡುವ ಸಾಧ್ಯತೆಯಿದೆ.
ಬೆಂಗಳೂರು(ನ.16): ಮಹಿಳೆಯರಿಗೆ ರಿಯಾಯಿತಿ ದರದ ಪ್ರತ್ಯೇಕ ಬಸ್ ಸೇವೆಯಾದ ದಿರಾ ಸಾರಿಗೆ ಯೋಜನೆ ನ.19ರಂದು ಘೋಷಣೆಯಾಗುವ ಸಾಧ್ಯತೆಯಿದೆ. ವಿಧಾನಮಂಡಲ ಅಧಿವೇಶನದ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿರುವ ಸಾರಿಗೆ ಸಚಿವ ಹೆಚ್.ಎಂ.ರೇವಣ್ಣ ಅವರು ಬೆಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್ ಅವರಿಗೆ ಗುರುವಾರ ಕುಂದನಗರಿಗೆ ಬರುವಂತೆ ಸೂಚಿಸಿದ್ದು, ನ.19ರಂದು ಈ ಯೋಜನೆ ಘೋಷಿಸಲು ಸಿದ್ಧತೆ ನಡೆಸಲು ಚರ್ಚಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಬಿಪಿಎಲ್‌ದಾರರಿಗೆ 500 ರು.ಗೆ ಬಿಎಂಟಿಸಿ ಬಸ್ ಪಾಸ್?
ಬಿಪಿಎಲ್ ಕಾರ್ಡ್‌ದಾರರಿಗೆ ರಿಯಾಯಿತಿ ದರದಲ್ಲಿ ಮಾಸಿಕ ಬಸ್ ಪಾಸ್ ನೀಡಲು ಬೆಂಗಳೂರು ಮಹಾ ನಗರ ಸಾರಿಗೆ ನಿಗಮ (ಬಿಎಂಟಿಸಿ) ಚಿಂತನೆ ನಡೆಸಿದ್ದು, ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಶೀಘ್ರವೇ ಪ್ರಸ್ತಾವನೆ ಸಲ್ಲಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರದ ಒತ್ತಾಸೆಯ ಮೇರೆಗೆ ಜಾರಿಗೊ ಳಿಸಲು ಮುಂದಾಗಿರುವ ಈ ಯೋಜನೆ ಅನ್ವಯ ಬಿಎಂಟಿಸಿಯು ಬಿಪಿಎಲ್ ಕಾರ್ಡ್ದಾರರಿಗೆ ಕೇವಲ 500 ರು.ಗೆ ಮಾಸಿಕ ಬಸ್ ಪಾಸ್ ನೀಡಲಿದೆ ಹಾಗೂ ಇದರಿಂದ ನಿಗಮದ ಮೇಲಾಗುವ ಹೊರೆಯನ್ನು ನೀಗಿಸಲು ಸರ್ಕಾರ ವಿಶೇಷ ಅನುದಾನವನ್ನು ನೀಡುವ ಸಾಧ್ಯತೆಯಿದೆ.
ಬಿಎಂಟಿಸಿಯಲ್ಲಿ ಪ್ರಸ್ತುತ ಸಾಮಾನ್ಯ ಬಸ್‌ಗಳ ಮಾಸಿಕ ಬಸ್ ಪಾಸ್ ದರ 1100 ರು. ಹಾಗೂ ಹವಾನಿಯಂತ್ರಿತ ಬಸ್ ಪಾಸ್ ದರ 2250 ರು. ಇದೆ. ಈ ಎರಡೂ ವರ್ಗದ ಬಸ್‌ಗಳಲ್ಲಿ ಪ್ರತಿ ತಿಂಗಳು 2 ರಿಂದ 2.50 ಲಕ್ಷ ಮಂದಿ ಬಸ್ ಪಾಸ್ ಖರೀದಿಸುತ್ತಿದ್ದಾರೆ. ಬಿಪಿಎಲ್ ಕಾರ್ಡ್ದಾರರಿಗೆ ಕೇವಲ 500 ರು. ಗೆ ಮಾಸಿಕ ಬಸ್ ಪಾಸ್ ದೊರೆತರೆ ಗಾರ್ಮೆಂಟ್ಸ್ ಉದ್ಯೋಗಿಗಳು, ಕಟ್ಟಡ ಕಾರ್ಮಿಕರು ಹಾಗೂ ದಿನಗೂಲಿ ಕಾರ್ಮಿಕರಿಗೆ ತುಂಬಾ ಅನುಕೂಲವಾ ಗಲಿದೆ. ನಿಗಮದ ಈ ದಿಸೆಯಲ್ಲಿ ಚಿಂತನೆ ನಡೆಸಿರುವುದು ಸ್ವಾಗತಾರ್ಹ ಎಂದು ಎಂದು ಕಾರ್ಮಿಕ ಮುಖಂಡ ನಾಗೇಶ್ ಹೇಳಿದ್ದಾರೆ.