ವೇದಿಕೆ ಮೇಲೆ ರಾಜ್ಯದ ಮುಖ್ಯಮಂತ್ರಿಗಳು ಬೆಂಗಳೂರಿನ ಜನರಿಗೆ ನೀಡಿದ ಮತ್ತೊಂದು ಭರವಸೆ. ಬೆಂಗಳೂರಲ್ಲಿ ಎರಡನೇ ಹಂತದಲ್ಲಿ 50 ಕ್ಯಾಂಟೀನ್ಗಳನ್ನು ಇದೇ ಅಕ್ಟೋಬರ್ 2ರಂದು ಲೋಕಾರ್ಪಣೆ ಮಾಡೋದಾಗಿ ಭರವಸೆ ನೀಡಿದ್ರು. ವಾಸ್ತವ ಏನ್ ಗೊತ್ತಾ? ಸದ್ಯಕ್ಕೆ ರೆಡಿಯಾಗಿರೋದು ಕೇವಲ 38 ಕ್ಯಾಂಟೀನ್ಗಳು ಇನ್ನೂ 12 ಕ್ಯಾಂಟೀನ್ಗಳ ಕೆಲಸ ಬಾಕಿಯಿದೆ.
ಬೆಂಗಳೂರು(ಸೆ.27): ವೇದಿಕೆ ಮೇಲೆ ರಾಜ್ಯದ ಮುಖ್ಯಮಂತ್ರಿಗಳು ಬೆಂಗಳೂರಿನ ಜನರಿಗೆ ನೀಡಿದ ಮತ್ತೊಂದು ಭರವಸೆ. ಬೆಂಗಳೂರಲ್ಲಿ ಎರಡನೇ ಹಂತದಲ್ಲಿ 50 ಕ್ಯಾಂಟೀನ್ಗಳನ್ನು ಇದೇ ಅಕ್ಟೋಬರ್ 2ರಂದು ಲೋಕಾರ್ಪಣೆ ಮಾಡೋದಾಗಿ ಭರವಸೆ ನೀಡಿದ್ರು. ವಾಸ್ತವ ಏನ್ ಗೊತ್ತಾ? ಸದ್ಯಕ್ಕೆ ರೆಡಿಯಾಗಿರೋದು ಕೇವಲ 38 ಕ್ಯಾಂಟೀನ್ಗಳು ಇನ್ನೂ 12 ಕ್ಯಾಂಟೀನ್ಗಳ ಕೆಲಸ ಬಾಕಿಯಿದೆ.
ಇಂದಿರಾ ಕ್ಯಾಂಟೀನ್ ಅವಾಂತರ ಇಷ್ಟೇ ಅಲ್ಲ. ಈಗಾಗಲೇ ಲೋಕಾರ್ಪಣೆಯಾಗಿರೋ 101 ಇಂದಿರಾ ಕ್ಯಾಂಟೀನ್ಗಳಲ್ಲಿ ಕೇವಲ 83 ಕ್ಯಾಂಟೀನ್ಗಳಿಗೆ ಮಾತ್ರ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅನುಮತಿ ಸಿಕ್ಕಿದೆ. ಇನ್ನುಳಿದ ಕ್ಯಾಂಟೀನ್ಗಳಿಗೆ ಅನುಮತಿ ಪಡೆಯೋ ಮುನ್ನವೇ ಮತ್ತಷ್ಟು ಕ್ಯಾಂಟೀನ್ ಉದ್ಘಾಟನೆಗೆ ಸರ್ಕಾರ ಮುಂದಾಗಿದೆ.
ಇನ್ನೂ ಪಾಲಿಕೆ ಅಧಿಕಾರಿಗಳ ಮೇಲೂ ಸರ್ಕಾರಕ್ಕೆ ಭರವಸೆ ಇಲ್ಲ ಅನ್ನಿಸುತ್ತೆ. ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ 27 ನಿವೃತ್ತ ಸೇನಾಧಿಕಾರಿಗಳ ನೇಮಕಕ್ಕೆ ಮುಂದಾಗಿದ್ದು, ಆರಂಭದಲ್ಲಿ 13 ಮಂದಿ ನೇಮಕ ಮಾಡಿ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ಸರ್ಕಾರ ಆರಂಭಿಸಿದ ಹಸಿವು ಮುಕ್ತ ಯೋಜನೆಯನ್ನು ಸರಿಯಾಗಿ ಜಾರಿಗೆ ತರುವಲ್ಲಿ ಸರ್ಕಾರ ಎಡವಿದ್ದಂತೂ ಸತ್ಯ.
