5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ ಸಿಗುವ ದಿನೇ ಬಂದೆ ಬಿಟ್ಟಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಇಂದಿರಾ ಕ್ಯಾಂಟಿನ್ ಯೋಜನೆಗೆ ಇಂದು ಹಸಿರು ನಿಶಾನೆ ಸಿಗಲಿದೆ. ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಇಂದು  ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ ಮಾಡಲಿದ್ದಾರೆ.

ಬೆಂಗಳೂರು(ಆ.16): ಸಿಎಂ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಇಂದಿನಿಂದ ಆರಂಭವಾಗಲಿದೆ. ಬಿಬಿಎಂಪಿಯ 198 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟಿನ್ ಗಳನ್ನು ತೆರಯಲು ನಿರ್ಧರಿಸಲಾಗಿದ್ದು, ಇಂದು 101 ಕ್ಯಾಂಟಿನ್ ಗಳು ಲೋಕಾರ್ಪಣೆಯಾಗಲಿವೆ. ಇಂದು ಬೆಂಗಳೂರಿಗೆ ಆಗಮಿಸುತ್ತಿರುವ ರಾಹುಲ್ ಗಾಂಧಿ, ಜಯನಗರ ವಾರ್ಡ್ನ ಕನಕನಪಾಳ್ಯದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟಿನ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹೀಗಾಗಿ ಇವತ್ತು ಸಚಿವ ಜಾರ್ಜ್, ಮೇಯರ್ ಜಿ. ಪದ್ಮಾವತಿ ಸೇರಿದಂತೆ ಪಾಲಿಕೆ ಅಧಿಕಾರಿಗಳು ನಗರದ ಬಹುತೇಕ ಕ್ಯಾಂಟೀನ್ಗಳ ಪರಿಶೀಲನೆ ನಡೆಸಿ, ಆಹಾರ ಪರೀಕ್ಷಿಸಿದರು.

ಇಂದಿರಾ ಕ್ಯಾಂಟೀನ್ 

28 ಲಕ್ಷ ರೂಪಾಯಿ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿಲಾಗಿದೆ. ಪ್ರತಿದಿನ 500 ರಿಂದ 600 ಜನರಿಗೆ ಊಟ ನೀಡಲಾಗುತ್ತೆ. ಹಾಗೇಯೆ 10 ರೂಗೆ ಹೊಟ್ಟೆ ತುಂಬಾ ಊಟ, 5 ರೂಗೆ ತಿಂಡಿ ಕೊಡಲಾಗುತ್ತೆ. ಬೆಳಗ್ಗೆ 7.30ರಿಂದ 10.30ರವರೆಗೆ ಉಪಾಹಾರ, ಮಧ್ಯಾಹ್ನ 12.30ರಿಂದ 2.30ರವರೆಗೆ ಊಟ ಮತ್ತು ರಾತ್ರಿ 7.30ರಿಂದ 8.30ರವರೆಗೆ ರಾತ್ರಿ ಊಟ ಇಂದಿರಾ ಕ್ಯಾಂಟಿನ್ ನಲ್ಲಿ ಲಭ್ಯವಿರುತ್ತದೆ. ಹೈಟೆಕ್ ಟೋಕನ್ನ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ ಌಪ್ ಕೂಡಾ ಬಿಡುಗಡೆ ಮಾಡಲಾಗಿದೆ.

ಒಟ್ಟಿನಲ್ಲಿ 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ ಸಿಗುವ ದಿನ ಬಂದೆಬಿಟ್ಟಿದ್ದು,ಸಾವಿರಾರು ಜನರಿಗೆ ಇದರ ಸದುಪಯೋಗ ಪಡೆಯಲಿದ್ದಾರೆ.