ಸೊಳ್ಳೆ ಇದೆ ಎಂದು ಹೇಳಿದ್ದಕ್ಕೆ ವೈದ್ಯರನ್ನು ವಿಮಾನದಿಂದ ಇಳಿಸಿದ ಇಂಡಿಗೋ ಸಿಬ್ಬಂದಿ

IndiGo offloads Bengaluru doctor after he complains of Mosquito menace
Highlights

ವಿಮಾನದಲ್ಲಿ ಸೊಳ್ಳೆ ಇದೆ ಎಂದು ಹೇಳಿದ್ದಕ್ಕೆ ಬೆಂಗಳೂರು ಮೂಲದ ವೈದ್ಯರೋರ್ವರನ್ನು ಇಂಡಿಗೋ ವಿಮಾನದಿಂದ ಕೆಳಕ್ಕಿಳಿಸಿದ ಘಟನೆ ಲಕ್ನೋ ಏರ್’ಪೋರ್ಟ್’ನಲ್ಲಿ ನಡೆದಿದೆ.

ಲಕ್ನೋ : ವಿಮಾನದಲ್ಲಿ ಸೊಳ್ಳೆ ಇದೆ ಎಂದು ಹೇಳಿದ್ದಕ್ಕೆ ಬೆಂಗಳೂರು ಮೂಲದ ವೈದ್ಯರೋರ್ವರನ್ನು ಇಂಡಿಗೋ ವಿಮಾನದಿಂದ ಕೆಳಕ್ಕಿಳಿಸಿದ ಘಟನೆ ಲಕ್ನೋ ಏರ್’ಪೋರ್ಟ್’ನಲ್ಲಿ ನಡೆದಿದೆ.

ವಿಮಾನವನ್ನು ಏರಿದ್ದ ಡಾ.ಸೌರಭ್ ರೈ ಅವರು ಅತ್ಯಂತ ನಿಂದನಾತ್ಮಕ ಭಾಷೆಯನ್ನು ಬಳಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಂಡಿಗೋ ಸಿಬ್ಬಂದಿ ಕಾರಣವನ್ನು ನೀಡಿದ್ದಾರೆ.

ವಿಮಾನದ ಒಳಕ್ಕೆ ಬರುತ್ತಿದ್ದಂತೆ ಸೊಳ್ಳೆ ಇರುವುದಾಗಿ ಇದನ್ನು ಪ್ರಯಾಣಿಕರಿಗೆ ತಿಳಿಸಬೇಕಾಗಿ ಹೇಳಿದ್ದಾರೆ.

ಇದರಿಂದ ಇಂಡಿಗೋ ಸಿಬ್ಬಂದಿ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ವಿಮಾನದಿಂದ ತಮ್ಮನ್ನು  ಕೆಳಕ್ಕೆ ಇಳಿಸಿದ್ದಾರೆ ಎಂದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಬ್ಬಂದಿ ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ಸೌರಭ್ ರೈ  ತಿಳಿಸಿದ್ದಾರೆ.

 

loader