ಎಂಜಿನ್‌ನಲ್ಲಿ ದೋಷ: 65 ವಿಮಾನಗಳ ಸಂಚಾರ ಬಂದ್

First Published 13, Mar 2018, 5:10 PM IST
IndiGo GoAir cancel 65 flights after DGCA grounds planes with faulty engines
Highlights

ಕಡಿಮೆ ದರದಲ್ಲಿ ಸಂಚರಿಸಬಹುದಾದ ಇಂಡಿಗೋ ಮತ್ತು ಗೋ ಏರ್ ವಿಮಾನಗಳ ಎಂಜಿನ್‌ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ನಿಯಂತ್ರಾಣಾಲಯ 65 ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದೆ.

ಮುಂಬಯಿ: ಕಡಿಮೆ ದರದಲ್ಲಿ ಸಂಚರಿಸಬಹುದಾದ ಇಂಡಿಗೋ ಮತ್ತು ಗೋ ಏರ್ ವಿಮಾನಗಳ ಎಂಜಿನ್‌ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ನಿಯಂತ್ರಾಣಾಲಯ 65 ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದೆ.

ಸುಮಾರು ಸಾವಿರ ವಿಮಾನಗಳು ಸಂಚರಿಸುವ ಗುರ್‌ಗಾವ್ ಮೂಲದ 47 ವಿಮಾನಗಳನ್ನು  ಇಂಡಿಗೋ ರದ್ದುಗೊಳಿಸಿದ್ದು, ವಾಡಿಯಾ ಗ್ರೂಪ್‌ನ ಗೋ ಏರ್ ವಿವಿಧ ನಗರಗಳಿಗೆ ಸಂಚರಿಸುವ 18 ವಿಮಾನಗಳ ಸಂಚಾರವೂ ರದ್ದಾಗಿದೆ. 

ದೆಲ್ಲಿ, ಮುಂಬಯಿ, ಚೆನ್ನೈ, ಕೊಲ್ಕತ್ತಾ, ಹೈದರಾಬಾದ್, ಬೆಂಗಳೂರು, ಪಾಟ್ನಾ, ಶ್ರೀನಗರ, ಭುವನೇಶ್ವರ್, ಅಮೃತಸರ್, ಅಮೃತಸರ್, ಶ್ರೀನಗರ, ಗೌಹಾತಿ ಸೇರಿ ದೇಶದ ವಿವಿಧ ನಗರಗಳಿಗೆ ಸಂಚರಿಸುವ  ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. 

ಲಖನೌಗೆ ಹೊರಟಿದ್ದ ಇಂಡಿಗೋ ವಿಮಾನವು 40 ನಿಮಿಷಗಳಲ್ಲಿಯೇ ಅಹ್ಮದಾಬಾದ್‌ಗೆ ಮರಳಿದ ಹಿನ್ನೆಲೆಯಲ್ಲಿ ನಿರ್ದೇಶನಾಲಯವು ವಿಮಾನಗಳ ಎಂಜಿನ್‌ಗಳನ್ನು ಪರೀಕ್ಷೆಗೊಳಪಡಿಸಿದ್ದು, ದೋಷವಿರುವುದು ಪತ್ತೆಯಾಗಿದೆ. 
 

loader