14 ಪ್ರಯಾಣಿಕರನ್ನು ಬಿಟ್ಟು 25 ನಿಮಿಷ ಮುಂಚೆಯೇ ಹೊರಟ ಇಂಡಿಗೋ ವಿಮಾನ

First Published 16, Jan 2018, 12:44 PM IST
Indigo Goa Hyderabad flight departs early leaves 14 passengers behind
Highlights

6ಇ 259 ವಿಮಾನ  ಸೋಮವಾರದಂದು ಹೈದರಾಬಾದಿಗೆ 10.55ಕ್ಕೆ ಹೊರಡಬೇಕಿತ್ತು. ಆದರೆ ಯಾವುದೇ ಸೂಚನೆ ನೀಡದೆ 10.25 ಕ್ಕೆ ಟೇಕ್ ಆಫ್ ಆಗಿ ಹೈದರಾಬಾದ್'ಗೆ 11.40ಕ್ಕೆ ತಲುಪಿದೆ. ಬೇಗ ಹೊರಟು ಪ್ರಯಾಣಿಕರ ಮೇಲೆ ಇಂಡಿಗೋ ಸಂಸ್ಥೆ ಗೂಬೆ ಕೂರಿಸಿದ್ದು ನಾವು ಹಲವು ಬಾರಿ ದ್ವನಿವರ್ಧಕದ ಮೂಲಕ  ಪ್ರಕಟಣೆ ನೀಡಿದ್ದೇವೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ಪಣಜಿ(ಜ.16): ಇಂಡಿಗೋ ಗೋವಾ-ಹೈದರಾಬಾದ್ ವಿಮಾನ ಯಾವುದೇ ಸೂಚನೆ ನೀಡದೆ 14 ಪ್ರಯಾಣಿಕರನ್ನು ಬಿಟ್ಟು ನಿಗದಿತ ಸಮಯಕ್ಕಿಂತ 25 ನಿಮಿಷ ಮುನ್ನ ಟೇಕ್ ಆಫ್ ಆದ ಘಟನೆ ಗೋವಾ ವಿಮಾನ ನಿಲ್ದಾಣದಲ್ಲಿ ಸೋಮವಾರ(ನ.15) ನಡೆದಿದೆ.

6ಇ 259 ವಿಮಾನ  ಸೋಮವಾರದಂದು ಹೈದರಾಬಾದಿಗೆ 10.55ಕ್ಕೆ ಹೊರಡಬೇಕಿತ್ತು. ಆದರೆ ಯಾವುದೇ ಸೂಚನೆ ನೀಡದೆ 10.25 ಕ್ಕೆ ಟೇಕ್ ಆಫ್ ಆಗಿ ಹೈದರಾಬಾದ್'ಗೆ 11.40ಕ್ಕೆ ತಲುಪಿದೆ. ಬೇಗ ಹೊರಟು ಪ್ರಯಾಣಿಕರ ಮೇಲೆ ಇಂಡಿಗೋ ಸಂಸ್ಥೆ ಗೂಬೆ ಕೂರಿಸಿದ್ದು ನಾವು ಹಲವು ಬಾರಿ ದ್ವನಿವರ್ಧಕದ ಮೂಲಕ  ಪ್ರಕಟಣೆ ನೀಡಿದ್ದೇವೆ ಎಂದು ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.

ನಮ್ಮ ಸಿಬ್ಬಂದಿ ಟ್ರಾವೆಲ್ ಏಜೆಂಟ್'ಗೆ ಕರೆ ಮಾಡಿ ಪ್ರಯಾಣಿಕರ ದೂರವಾಣಿ ಸಂಖ್ಯೆಗಳನ್ನು ಪಡೆಯಲು ಪ್ರಯತ್ನಿಸಿದೆವು. ಆದರೆ ಏಜೆಂಟ್'ಗಳು ದೂರವಾಣಿ ಸಂಖ್ಯೆಗಳನ್ನು ನೀಡದೆ ತಾವೇ ತಿಳಿಸುವುದಾಗಿ ಹೇಳಿದರು. ಅನಂತರವೂ ವಿಮಾನ ಬೇಗ ಹೊರಡುವುದಾಗಿ ಸೂಚಿಸಲಾಗಿತ್ತು' ಎಂದು ಬೇಗ ಟೇಕ್ ಆಫ್ ಆದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.  

loader