ಅಮೆರಿಕ ವೀಸಾ ನೀಡುವ ವೇಳೆ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಟ್ರಂಪ್‌ ಸರ್ಕಾರ ಅರ್ಜಿಗಳ ಪರಿಶೀಲನೆ ನಡೆಸಲಿದೆ ಎಂಬ ವಿಚಾರದ ನಡುವೆಯೇ, ಅಮೆರಿಕದಲ್ಲಿ ಕಾರ್ಯ ನಿರ್ವಹಿಸುವ ಆಕಾಂಕ್ಷೆ ಹೊಂದಿದ ಕೌಶಲ್ಯಭರಿತ ಭಾರತೀಯ ವೃತ್ತಿ ಪರರು, ಅಮೆರಿಕದ ಎಚ್‌-1ಬಿ ವೀಸಾಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೋಮವಾರದಿಂದಲೇ ಆರಂಭವಾಗಲಿದೆ.

ವಾಷಿಂಗ್ಟನ್‌: ಅಮೆರಿಕ ವೀಸಾ ನೀಡುವ ವೇಳೆ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಟ್ರಂಪ್‌ ಸರ್ಕಾರ ಅರ್ಜಿಗಳ ಪರಿಶೀಲನೆ ನಡೆಸಲಿದೆ ಎಂಬ ವಿಚಾರದ ನಡುವೆಯೇ, ಅಮೆರಿಕದಲ್ಲಿ ಕಾರ್ಯ ನಿರ್ವಹಿಸುವ ಆಕಾಂಕ್ಷೆ ಹೊಂದಿದ ಕೌಶಲ್ಯಭರಿತ ಭಾರತೀಯ ವೃತ್ತಿ ಪರರು, ಅಮೆರಿಕದ ಎಚ್‌-1ಬಿ ವೀಸಾಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸೋಮವಾರದಿಂದಲೇ ಆರಂಭವಾಗಲಿದೆ.

ಎಚ್‌-1ಬಿ ವೀಸಾ ಕೋರಿ ಸಲ್ಲಿಸುವ ಅರ್ಜಿಯಲ್ಲಿ ಸಣ್ಣ ಪುಟ್ಟತಪ್ಪುಗಳಾಗಿದ್ದರೂ, ಯಾವುದೇ ಕಾರಣಕ್ಕೂ ಅದನ್ನು ಸಹಿಸಲಾಗುವುದಿಲ್ಲ. ಅಂಥ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ ಎಂದು ಅಮೆರಿಕದ ನಾಗರಿಕತ್ವ ಮತ್ತು ವಲಸೆ ಸೇವೆಗಳ ಸಂಸ್ಥೆ(ಯುಎಸ್‌ಸಿಐಎಸ್‌) ತಿಳಿಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಎಚ್‌-1ಬಿ ವೀಸಾ ಕೋರಿ ಸಲ್ಲಿಕೆಯಾದ ಹೆಚ್ಚು ಅರ್ಜಿಗಳು ತಿರಸ್ಕೃತಗೊಳ್ಳುವ ಸಾಧ್ಯತೆಯಿದೆ ಎಂದು ಈಗಾಗಲೇ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌ ಮತ್ತು ವಾಟ್ಸಪ್‌ ಗ್ರೂಪ್‌ಗಳಲ್ಲಿ ಚರ್ಚೆಯಾಗುತ್ತಿದೆ.

ಅಮೆರಿಕದ ಕಂಪನಿಗಳಲ್ಲಿ ಖಾಲಿಯಿರುವ ತಾಂತ್ರಿಕ ಮತ್ತು ಇತರ ವಿಶೇಷತೆಯ ಹುದ್ದೆಗಳ ಭರ್ತಿಗಾಗಿ ವಿದೇಶಿ ನೌಕರರ ನೇಮಕಕ್ಕೆ ನೀಡಲಾಗುವ ವೀಸಾಗಳೇ ಎಚ್‌-1ಬಿ ಆಗಿದ್ದು, ಈ ವೀಸಾದಡಿ ಭಾರತ ಮತ್ತು ಚೀನಾದ ತಂತ್ರಜ್ಞರೇ ಅಮೆರಿಕ ಪ್ರವೇಶ ಪಡೆಯುತ್ತಾರೆ. ಪ್ರತಿ ವಿತ್ತೀಯ ವರ್ಷದಲ್ಲಿ 65 ಸಾವಿರ ಎಚ್‌-1ಬಿ ವೀಸಾಗಳನ್ನು ಮಾತ್ರ ನೀಡಬೇಕೆಂಬ ನಿರ್ಣಯವನ್ನು ಅಮೆರಿಕ ಪಾಲಿಸುತ್ತಿದೆ.