ಹೃದಯಾಘಾತದಿಂದ ಲೈವ್‌ನಲ್ಲೇ ಸಾವು ವಿಡಿಯೋ ವೈರಲ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Sep 2018, 10:25 PM IST
Indian Writer and Artist Dies in Live tv Show in Kashmir viral video
Highlights

ಅಲ್ಲಿ ಟಿವಿ ಶೋ ನಡೆಯುತ್ತಿತ್ತು. ಚರ್ಚೆಯಲ್ಲಿ ಭಾಗವಹಿಸಿದ್ದ ವಿದ್ಯಾಂಸೆಯೊಬ್ಬರು ಇದ್ದಕ್ಕಿದ್ದಂತೆ ಹಿಂದಕ್ಕೆ ಒರಗಿದರು. ಏನು ಆಗುತ್ತಿದೆ ಎಂದು ನೋಡುವಷ್ಟರಲ್ಲಿ ಅವರ ಪ್ರಾಣ ಪಕಷಿ ಹಾರಿ ಹೋಗಿತ್ತು.. ಹೌದು ಇಂಥದ್ದೊಂದು ಘಟನೆಗೆ ಜಮ್ಮು-ಕಾಶ್ಮೀರದ ವಾಹಿನಿಯ ಸ್ಟುಡಿಯೋ ಒಂದು ಸಾಕ್ಷಿಯಾಗಿದೆ.

ಶ್ರೀನಗರ[ಸೆ.11]  ಸಾಮಾಜಿಕ ಕಾರ್ಯಕರ್ತೆ, ವಿದ್ವಾಂಸೆಯೊಬ್ಬರು ಟಿ.ವಿ. ಶೋದಲ್ಲಿ ಮಾತನಾಡುತ್ತಿದ್ದಾಗಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜಮ್ಮು-ಕಾಶ್ಮೀರದ ಡೋಗ್ರಿ ವಿದ್ವಾಂಸೆ ರಿತಾ ಜಿತೇಂದರ್​ (81) ಅವರನ್ನು ಸಾವು ಟಿವಿ ಸ್ಟುಡಿಯೋದಲ್ಲಿ ಹುಡುಕಿಕೊಂಡು ಬಂದಿದೆ.

ನೇರ ಪ್ರಸಾರದಲ್ಲಿ ಮಾತನಾಡುತ್ತಿದ್ದಾಗಲೇ  ಹಾರ್ಟ್​ ಅಟ್ಯಾಕ್​ನಿಂದ ಮೃತಪಟ್ಟ 56 ಸೆಕೆಂಡ್​ಗಳ ವಿಡಿಯೋ ವೈರಲ್​ ಆಗುತ್ತಿದೆ. ರಿತಾ ಅವರು ಟಿವಿ ನಿರೂಪಕರಿಂದ ತುಂಬ ದೂರವೇನೂ ಕುಳಿತಿರಲಿಲ್ಲ. ಹಾಗೇ ಮಾತನಾಡುತ್ತಿರುವಾಗಲೇ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಆ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಜನರು ಕಂಬನಿ ಮಿಡಿದಿದ್ದಾರೆ

 

 

loader