ಕೃಷ್ಣನ್‌'ಗೆ ಇಲ್ಲಿ ಮಾಸಿಕ 1 ಲಕ್ಷ ರೂಪಾಯಿ ವೇತನ ಇದ್ದು, ಅವರ ಪತ್ನಿ ಕೂಡಾ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ದುಬೈ(ಮಾ.06): ಇಲ್ಲಿನ ಸರಕು ಸಾಗಣೆ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀರಾಜ್ ಕೃಷ್ಣನ್ ಎಂಬ ಕೇರಳ ಮೂಲದ ವ್ಯಕ್ತಿಯೊಬ್ಬರು ಭರ್ಜರಿ 12 ಕೋಟಿ ರೂಪಾಯಿ ಲಾಟರಿ ಗೆದ್ದಿದ್ದಾರೆ.

ದುಬೈನಲ್ಲಿ ಭಾರೀ ಬಹುಮಾನಕ್ಕೆ ಹೆಸರಾಗಿರುವ ‘ಬಿಗ್ ಟಿಕೆಟ್’ನಲ್ಲಿ ಲಾಟರಿ ಟಿಕೆಟ್ ಕೊಳ್ಳುವ ಹವ್ಯಾಸ ಹೊಂದಿದ್ದ ಕೃಷ್ಣನ್‌'ಗೆ ಇದುವರೆಗೆ ಎಂದೂ ಬಹುಮಾನ ಬಂದಿರಲಿಲ್ಲ. ಇದೇ ಕೊನೆ ಬಾರಿ ಎಂದು ಅವರು ಕೊಂಡಿದ್ದ ಟಿಕೆಟ್‌'ಗೆ ಇದೀಗ 12 ಕೋಟಿ ರೂಪಾಯಿ ಬಹುಮಾನ ಬಂದಿದೆ.

ಕೃಷ್ಣನ್‌'ಗೆ ಇಲ್ಲಿ ಮಾಸಿಕ 1 ಲಕ್ಷ ರೂಪಾಯಿ ವೇತನ ಇದ್ದು, ಅವರ ಪತ್ನಿ ಕೂಡಾ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಾಟರಿ ಹಣದಿಂದ ಕೇರಳದಲ್ಲಿ ಮನೆ ಕಟ್ಟಿಸಲು ಪಡೆದಿದ್ದ ಸಾಲವನ್ನು ಮೊದಲು ಮರುಪಾವತಿ ಮಾಡುತ್ತೇನೆ. ಭಾರೀ ಲಾಟರಿ ಹೊಡೆದಿದ್ದರೂ, ಮುಂದೆಯೂ ದುಬೈನಲ್ಲೇ ಕೆಲಸ ಮಾಡುವುದಾಗಿ ಕೃಷ್ಣನ್ ಹೇಳಿದ್ದಾರೆ.