ನ್ಯೂಯಾರ್ಕ್(ಆ.17): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ಕ್ರಮವನ್ನು ವಿಶ್ವಸಂಸ್ಥೆಯಲ್ಲಿ ಪ್ರಶ್ನಿಸಿದ್ದ ಪಾಕಿಸ್ತಾನಕ್ಕೆ ಮುಖಭಂಗವಾಗಿರುವುದು ಎಲ್ಲಿರಗೂ ಗೊತ್ತೇ ಇದೆ.

ಆರ್ಟಿಕಲ್ 370 ರದ್ದತಿ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಡೆದ ಚರ್ಚೆಯಲ್ಲಿ, ಭಾರತದ ಪರ ನಿರ್ಣಯ ಕೈಗೊಳ್ಳಲಾಗಿದ್ದು, ಜಮ್ಮು ಮತ್ತು ಕಾಶ್ಮೀರ ಕುರಿತು ಮಾತುಕತೆ ನಡೆಸುವಂತೆ ಕೋರಿದ್ದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದೆ.

ಈ ಮಧ್ಯೆ ಇದೇ ವಿಷಯವಾಗಿ ಭಾರತ ಯಾವಾಗ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲಿದೆ ಎಂಬ ಪಾಕ್ ಪತ್ರಕರ್ತರ ಪ್ರಶ್ನೆಗೆ, ವಿಶ್ವಸಂಸ್ಥೆಗೆ ಭಾರತದ ಖಾಯಂ ರಾಯಭಾರಿ ಸೈಯ್ಯದ್ ಅಕ್ಬರುದ್ದೀನ್ ನೀಡಿದ ಖಡಕ್ ಉತ್ತರ ಭಾರೀ ವೈರಲ್ ಆಗಿದೆ.

ಆರ್ಟಿಕಲ್ 370 ರದ್ದತಿ ಭಾರತದ ಆಂತರಿಕ ವಿಚಾರವಾಗಿದ್ದು, ಈ ಕುರಿತು ತಾನು ಯಾವುದೇ ನಿರ್ದೇಶನ ನೀಡುವುದಿಲ್ಲ ಎಂದು ವಿಶ್ಚಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯ ಕೈಗೊಂಡಿತ್ತು. ಈ ಕುರಿತು ಸೈಯದ್ ಅಕ್ಬರುದ್ದೀನ್ ಪತ್ರಿಕಾಗೋಷ್ಠಿ ನಡೆಸಿ ವಿವರಣೆ ನೀಡುತ್ತಿದ್ದರು.

ಆಗ ಮಧ್ಯಪ್ರವೇಶಿಸಿದ ಫಾಕ್ ಪತ್ರಕರ್ತರು, ಇದೇ ವಿಷಯವಾಗಿ ಭಾರತ ಯಾವಾಗ ಪಾಕಿಸ್ತಾಮನದೊಂದಿಗೆ ಮಾತುಕತಡೆ ನಡೆಸಲಿದೆ ಎಂದು ಕೇಳಿದ್ದಾರೆ. ಇದಕ್ಕೆ ನಗುತ್ತಾ ಉತ್ತರಿಸಿದ ಸೈಯ್ಯದ್, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮೂವರು ಪಾಕ್ ಪತ್ರಕರ್ತರ ಬಳಿ ತೆರಳಿ ಕೈ ಕುಲುಕಿದರು. ಅಲ್ಲದೇ ನೋಡಿ ಭಾರತ ಮಾತುಕತೆ ಆರಂಭಿಸಿದೆ ಎಂದು ವ್ಯಂಗ್ಯವಾಡಿದರು.

ಸೈಯ್ಯದ್ ಅಕ್ಬರುದ್ದೀನ್ ಅವರ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಪಾಕ್ ಪತ್ರಕರ್ತರ ಬಾಯಿ ಮುಚ್ಚಿಸಿದ ರಾಯಭಾರಿಗೆ ಎಲ್ಲರೂದ ಭೇಷ್ ಎಂದಿದ್ದಾರೆ.