ನಕ್ಷತ್ರಗಳ ಸಮೂಹಗಳು ಸೇರಿ ಗೆಲಾಕ್ಸಿಗಳಾಗುತ್ತವೆ. ಗೆಲಾಕ್ಸಿಗಳ ಸಮೂಹವು ಕ್ಲಸ್ಟರ್'ಗಳಾಗುತ್ತವೆ. ಇಂಥ ಬೃಹತ್ ಕ್ಲಸ್ಟರ್'ಗಳೇ ಸೂಪರ್'ಕ್ಲಸ್ಟರ್ ಎನಿಸುತ್ತವೆ. ಗುರುತ್ವಾಕರ್ಷಣ ಶಕ್ತಿಯಿಂದ ಇವು ಒಂದೆಡೆ ಅಸ್ತಿತ್ವದಲ್ಲಿವೆ. ಒಂದೊಂದು ಕ್ಲಸ್ಟರ್'ಗಳಲ್ಲಿ ಹತ್ತಾರು ಗೆಲಾಕ್ಸಿಗಳಿಂದ ಹಿಡಿದು ಸಾವಿರಾರು ಗೆಲಾಕ್ಸಿಗಳಿರುತ್ತವೆ.
ನವದೆಹಲಿ: 20 ದಶಲಕ್ಷ ಶತಕೋಟಿ ಸೂರ್ಯರಷ್ಟು ದೊಡ್ಡದಾದ ನಕ್ಷತ್ರ ಸಮೂಹವೊಂದನ್ನು ಭಾರತೀಯ ಮೂಲದ ವಿಜ್ಞಾನಿಗಳ ತಂಡ ಕಂಡು ಹಿಡಿದಿದ್ದು, ಇದಕ್ಕೆ ಸರಸ್ವತಿ ಎಂಬ ಹೆಸರನ್ನು ನೀಡಲಾಗಿದೆ. ಈ ನಕ್ಷತ್ರಪುಂಜ ಭೂಮಿಯಿಂದ 4 ಸಾವಿರ ದಶಲಕ್ಷ (400 ಕೋಟಿ) ಜೋತಿರ್ವರ್ಷಗಳಷ್ಟು ದೂರದಲ್ಲಿದೆ. ಸುಮಾರು 1,000 ಕೋಟಿ ವರ್ಷಗಳಷ್ಟು ಹಳೆಯದಾಗಿದೆ. ನಕ್ಷತ್ತ ಸಮೂಹದ ವ್ಯಾಪ್ತಿ 600 ದಶಲಕ್ಷ ಜೋತಿರ್ವರ್ಷಗಳಿಗೆ ವಿಸ್ತರಿಸಿದೆ ಎಂದು ಪುಣೆ ಮೂಲದ ಇಂಟರ್ ಯುನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರೋನಮಿ ಆ್ಯಂಡ್ ಆಸ್ಟ್ರೋಫಿಸಿಕ್ಸ್ (ಐಯುಸಿಎಎ) ತಿಳಿಸಿದೆ. ಪುಣೆಯ ಐಐಎಸ್'ಇಆರ್'ನ ಸಂಶೋಧಕ ಶಿಶಿರ್ ಸಂಖ್ಯಾಯನ್ ನೇತೃತ್ವದ ತಂಡ ಸರಸ್ವತಿ ನಕ್ಷತ್ರ ಪುಂಜವನ್ನು ಕಂಡು ಹಿಡಿದಿದೆ.
ಬೃಹತ್ ನಕ್ಷತ್ರಪುಂಜಗಳು ಅಥವಾ ಸೂಪರ್'ಕ್ಲಸ್ಟರ್'ಗಳು ನಮ್ಮ ಬ್ರಹ್ಮಾಂಡದ ಅತೀದೊಡ್ಡ ಸಮೂಹಗಳಾಗಿವೆ. ನಕ್ಷತ್ರಗಳ ಸಮೂಹಗಳು ಸೇರಿ ಗೆಲಾಕ್ಸಿಗಳಾಗುತ್ತವೆ. ಗೆಲಾಕ್ಸಿಗಳ ಸಮೂಹವು ಕ್ಲಸ್ಟರ್'ಗಳಾಗುತ್ತವೆ. ಇಂಥ ಬೃಹತ್ ಕ್ಲಸ್ಟರ್'ಗಳೇ ಸೂಪರ್'ಕ್ಲಸ್ಟರ್ ಎನಿಸುತ್ತವೆ. ಗುರುತ್ವಾಕರ್ಷಣ ಶಕ್ತಿಯಿಂದ ಇವು ಒಂದೆಡೆ ಅಸ್ತಿತ್ವದಲ್ಲಿವೆ. ಒಂದೊಂದು ಕ್ಲಸ್ಟರ್'ಗಳಲ್ಲಿ ಹತ್ತಾರು ಗೆಲಾಕ್ಸಿಗಳಿಂದ ಹಿಡಿದು ಸಾವಿರಾರು ಗೆಲಾಕ್ಸಿಗಳಿರುತ್ತವೆ. ಬೆಳಕಿನ ಕಿರಣವೊಂದು ಈ ಸೂಪರ್'ಕ್ಲಸ್ಟರ್'ನ ಒಂದು ತುದಿಯಿಂದ ಮತ್ತೊಂದು ತುದಿಗೆ ತಲುಪಲು 60 ಕೋಟಿ ಜ್ಯೋತಿರ್ವರ್ಷಗಳು ಬೇಕಾಗುತ್ತದೆ.
ನಾವಿರುವ ಸೌರಮಂಡಲದ ಸೂರ್ಯನು ಮಿಲ್ಕಿವೇ ಗೆಲಾಕ್ಸಿಗೆ ಸೇರಿದ್ದಾಗಿದೆ. ಈ ಮಿಲ್ಕಿವೇ ಗೆಲಾಕ್ಸಿಯು ಲಾನಿಯಾಕೀ ಎಂಬ ಸೂಪರ್'ಕ್ಲಸ್ಟರ್'ನ ಒಂದು ಭಾಗವಾಗಿದೆ.
ಅಂದಹಾಗೆ, ಪುಣೆಯ ಭಾರತೀಯ ವಿಜ್ಞಾನಿಗಳು ತಾವು ಪತ್ತೆ ಮಾಡಿರುವ ಈ ಸೂಪರ್'ಕ್ಲಸ್ಟರ್ ಅನ್ನು "ಸರಸ್ವತಿ" ಎಂದು ನಾಮಕರಣ ಮಾಡಿದ್ದಾರೆ. ದೇವಿ ಸರಸ್ವತಿಯ ಹೆಸರನ್ನೇ ಯಾಕೆ ಇಟ್ಟರೆಂಬುದು ಗೊತ್ತಿಲ್ಲ.
