ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ, ಜನಸಾಮಾನ್ಯರ ಜೀವನದ ಮೇಲೆ ಉಂಟಾಗುವ ಪರಿಣಾಮವೇನು ?

ಯುಎಸ್ ಡಾಲರ್ (US dollar) ಎದುರು ಭಾರತೀಯ ರೂಪಾಯಿ (Indian Rupee) ಸೋಮವಾರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಈಗಾಗಲೇ ಹಣದುಬ್ಬರದಿಂದ ತತ್ತರಿಸುತ್ತಿರುವ ಭಾರತದ ಆರ್ಥಿಕತೆಗೆ ಇದರಿಂದ ಮತ್ತಷ್ಟು ಹೊಡೆತ ಬಿದ್ದಂತಾಗಿದೆ

Indian Rupee falls to all-time low against US dollar Vin

ಯುಎಸ್ ಡಾಲರ್ (US Dollar) ಎದುರು ಭಾರತೀಯ ರೂಪಾಯಿ (Indian Rupee) ಸೋಮವಾರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.. ಈಗಾಗಲೇ ಹಣದುಬ್ಬರದಿಂದ (Inflation) ತತ್ತರಿಸುತ್ತಿರುವ ಭಾರತದ ಆರ್ಥಿಕತೆಗೆ (Economy of India) ಇದರಿಂದ ಮತ್ತಷ್ಟು ಹೊಡೆತ ಬಿದ್ದಂತಾಗಿದೆ. ರೂಪಾಯಿ ಮೌಲ್ಯವು 51 ಪೈಸೆಗಳಷ್ಟು ಕುಸಿದು ಯುಎಸ್ ಡಾಲರ್ ಎದುರು 77.49ರ ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದೆ. 

ಕಳೆದ ಕೆಲವು ದಿನಗಳಲ್ಲಿ ಡಾಲರ್ ಎದುರು ರೂಪಾಯಿಯ ತೀವ್ರ ಕುಸಿತಕ್ಕೆ ಕಾಣುತ್ತಲೇ ಇದೆ. ತಜ್ಞರುಗಳು ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯಲು ಹಲವು ಕಾರಣಗಳನ್ನು ನೀಡಿದ್ದಾರೆ. ಡಾಲರ್ ಬಲಗೊಳ್ಳುತ್ತಿರುವ ಕಾರಣದಿಂದಾಗಿ ರೂಪಾಯಿ ಕುಸಿಯುತ್ತಿದೆ ಎಂದು ಕೆಲವು ತಜ್ಞರು ಹೇಳಿದರೆ, ಇನ್ನು ಕೆಲವರು ಇದಕ್ಕೆಲ್ಲ ದೇಶೀಯ ಹಣದುಬ್ಬರವೇ ಕಾರಣ ಎಂದು ಹೇಳಿದ್ದಾರೆ. ಈಕ್ವಿಟಿ ಮಾರುಕಟ್ಟೆಯೂ ಕೂಡಾ ರೂಪಾಯಿ ಕುಸಿತಕ್ಕೆ ಕಾರಣ ಎಂದು ಇನ್ನು ಕೆಲವರು ಹೇಳಿದ್ದಾರೆ. 

Fact Check: ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರಾಗಿ ರಘುರಾಮ್ ರಾಜನ್ ನೇಮಕವಾಗಿಲ್ಲ: ವೈರಲ್‌ ಮೆಸೇಜ್‌ ಸುಳ್ಳು!

ಕುಸಿಯುತ್ತಿರುವ ರೂಪಾಯಿ ಮೌಲ್ಯದ ನೇರ ಪರಿಣಾಮ:

-ಆಮದು ಅಗ್ಗವಾಗುತ್ತದೆ, ರಫ್ತು ದುಬಾರಿಯಾಗುತ್ತದೆ
-ಅಧ್ಯಯನ ಮತ್ತು ವಿದೇಶ ಪ್ರಯಾಣ ದುಬಾರಿಯಾಗುತ್ತದೆ.
-ಅಲ್ಪಾವಧಿಯಲ್ಲಿ ಹಣದುಬ್ಬರವನ್ನು ಹೆಚ್ಚಿಸಬಹುದು
-ವಿದೇಶಿ ಹೂಡಿಕೆದಾರರಿಂದ ಹೂಡಿಕೆಯಲ್ಲಿ ಹೆಚ್ಚಳ

ಜನಸಾಮಾನ್ಯರ ಜೀವನದ ಮೇಲೆ ರೂಪಾಯಿ ಮೌಲ್ಯ ಕುಸಿತ ಹೇಗೆ ಪರಿಣಾಮ ಬೀರುತ್ತದೆ?

1) ಆಮದುಗಳು:
ಆಮದು ಮಾಡಿದ ವಸ್ತುಗಳನ್ನು ಪಾವತಿಸಲು ಆಮದುದಾರರು ಡಾಲರ್‌ಗಳನ್ನು ಖರೀದಿಸಬೇಕಾಗುತ್ತದೆ. ರೂಪಾಯಿ ಕುಸಿತದಿಂದ ವಸ್ತುಗಳ ಆಮದು ದುಬಾರಿಯಾಗಲಿದೆ. ತೈಲ ಆಮದುಗಳು ದುಬಾರಿಯಾಗುತ್ತವೆ, ಇದು ಗ್ರಾಹಕರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹೆಚ್ಚುವರಿಯಾಗಿ, ಇತರ ಆಮದು ಮಾಡಿದ ವಸ್ತುಗಳು ಮತ್ತು ಘಟಕಗಳು ಸಹ ದುಬಾರಿಯಾಗುವ ಸಾಧ್ಯತೆಯಿದೆ. ಇದರರ್ಥ ಕಾರುಗಳು ಮತ್ತು ಉಪಕರಣಗಳು ದುಬಾರಿಯಾಗುತ್ತವೆ.

SBI Interest Rate:ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ; ಹೊಸ ದರ ಎಷ್ಟಿದೆ? ಚೆಕ್ ಮಾಡಿ

2) ಸಾಲ:
ಸಾಲಗಳ ಮೇಲೆ ಪರೋಕ್ಷ ಪರಿಣಾಮ ಬೀರುವ ಸಾಧ್ಯತೆ ಇದೆ. ರೂಪಾಯಿ ಮೌಲ್ಯ ಕುಸಿದಂತೆ, ಆಮದು ಬೆಲೆಗಳು ಹೆಚ್ಚಾಗುತ್ತವೆ, ವಸ್ತುಗಳು ಮತ್ತು ಸರಕುಗಳು ಹೆಚ್ಚು ದುಬಾರಿಯಾಗುತ್ತವೆ. ಇದು ಹಣದುಬ್ಬರವನ್ನು ಹೆಚ್ಚಿಸುತ್ತದೆ. ಈಗ, ಏರುತ್ತಿರುವ ಹಣದುಬ್ಬರದೊಂದಿಗೆ, RBI ರೆಪೋ ದರವನ್ನು ಏರಿಕೆ ಮಾಡುತ್ತದೆ. ಇದು ಈಗಾಗಲೇ 40 bps ನಿಂದ 4.40 ಶೇಕಡಾಕ್ಕೆ ಏರಿದೆ. ಹೆಚ್ಚಿನ ರೆಪೋ ದರಗಳು ಎಂದರೆ ಬ್ಯಾಂಕುಗಳು ಸಾಲದ ದರಗಳನ್ನು ಹೆಚ್ಚಿಸುತ್ತವೆ, ಇಎಂಐಗಳು ದುಬಾರಿಯಾಗುತ್ತವೆ. ಬ್ಯಾಂಕ್‌ಗಳು ಈಗಾಗಲೇ ಸಾಲದ ದರವನ್ನು ಹೆಚ್ಚಿಸಿವೆ.

3) ಕಾರುಗಳು, ಇತರ ವಸ್ತುಗಳು:
ರೂಪಾಯಿ ಮೌಲ್ಯದ ಕುಸಿತದೊಂದಿಗೆ, ಐಷಾರಾಮಿ ಕಾರುಗಳಂತಹ ಆಮದು ಮಾಡಿದ ವಸ್ತುಗಳು ಅಥವಾ ಕಾರಿನ ಬಿಡಿಭಾಗಗಳು ಸಹ ದುಬಾರಿಯಾಗುವ ಸಾಧ್ಯತೆಯಿದೆ. ಇದಲ್ಲದೆ ಫೋನ್‌ಗಳು ಮತ್ತು ಉಪಕರಣಗಳಂತಹ ಆಮದು ಮಾಡಲಾದ ವಸ್ತುಗಳು ಸಹ ದುಬಾರಿಯಾಗುತ್ತವೆ.

4) ಷೇರುಗಳು:
ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳಿಂದ ಹಿಂದೆ ಸರಿದ ಪರಿಣಾಮ ರೂಪಾಯಿ ಮೌಲ್ಯ ಕುಸಿತವು ಉಂಟಾಗುತ್ತದೆ. ಇದರ್ಥ ಈಕ್ವಿಟಿ ಮಾರುಕಟ್ಟೆಗಳಲ್ಲೂ ತೀವ್ರ ಕುಸಿತ ಉಂಟಾಗಬಹುದು, ಪರಿಣಾಮವಾಗಿ ಸ್ಟಾಕ್ ಮತ್ತು ಇಕ್ವಿಟಿ ಮ್ಯೂಚುವಲ್ ಫಂಡ್ ಹೂಡಿಕೆಗಳಲ್ಲಿ ಇಳಿಕೆ ಕಂಡುಬರುತ್ತದೆ.

5) ವಿದೇಶಿ ಶಿಕ್ಷಣ:
ಡಾಲರ್ ಎದುರು ರೂಪಾಯಿ ಮೌಲ್ಯ ಕಳೆದುಕೊಳ್ಳುವುದರಿಂದ ವಿದೇಶಿ ಶಿಕ್ಷಣ ದುಬಾರಿಯಾಗಲಿದೆ. ಏಕೆಂದರೆ ಅದರ ಸವಕಳಿಯಿಂದಾಗಿ ಪ್ರತಿ ಡಾಲರ್‌ಗೆ ಹೆಚ್ಚಿನ ರೂಪಾಯಿಗಳನ್ನು ನೀಡಬೇಕಾಗುತ್ತದೆ. ಆದ್ದರಿಂದ ವಿದೇಶದಲ್ಲಿರುವ ವಿದ್ಯಾರ್ಥಿಗಳು ಅಥವಾ ವಿದೇಶಕ್ಕೆ ತೆರಳಲು ಯೋಜಿಸುತ್ತಿರುವವರು ತಮ್ಮ ಬಜೆಟ್ ಅನ್ನು ಪುನರ್ರಚಿಸಬೇಕು.

6) ವಿದೇಶಿ ಪ್ರಯಾಣ:
ರೂಪಾಯಿ ಮೌಲ್ಯ ಕುಸಿತವು ಫಾರಿನ್ ಟೂರ್ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ವಿದೇಶಕ್ಕೆ ಹೋಗಲು ಯೋಜಿಸುತ್ತಿದ್ದವರಿಗೆ ಇದು ನಿರಾಶಾದಾಯಕ ಸುದ್ದಿಯಾಗಿದೆ, ಏಕೆಂದರೆ ವಿದೇಶಕ್ಕೆ ಹೋಗಲು ಅವರ ಬಜೆಟ್ಗಿಂತ ಹೆಚ್ಚು ವೆಚ್ಚವಾಗಬಹುದು.

7) ಆರ್‌ಬಿಐ ಮಧ್ಯಸ್ಥಿಕೆ:
ಹಣದ ಚಂಚಲತೆಯನ್ನು ನಿಯಂತ್ರಣದಲ್ಲಿ ತರಲು ಕೇಂದ್ರೀಯ ಬ್ಯಾಂಕ್ ಡಾಲರ್‌ಗಳನ್ನು ಬಿಡುಗಡೆ ಮಾಡಬಹುದು. ಆದರೆ ವಿದೇಶೀ ವಿನಿಮಯ ಒಂದು ವರ್ಷದಲ್ಲಿ ಮೊದಲ ಬಾರಿಗೆ $600 ಶತಕೋಟಿಗಿಂತ ಕಡಿಮೆಯಾಗಿದೆ. 2022ರಲ್ಲಿ, ವಿದೇಶಿ ವಿನಿಮಯವು $ 36 ಶತಕೋಟಿಗಳಷ್ಟು ಖಾಲಿಯಾಗಿದೆ. ಈ ಅಂಕಿಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಹೇಗೆ ಲೆಕ್ಕಾಚಾರ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Latest Videos
Follow Us:
Download App:
  • android
  • ios