ಕರ್ನಾಟಕಕ್ಕೆ 16 ಹೊಸ ರೈಲು ಮಾರ್ಗ

First Published 3, Aug 2018, 12:15 PM IST
Indian Railways to introduce more than 200 new lines
Highlights

ಕರ್ನಾಟಕದಲ್ಲಿ 16 ಸೇರಿದಂತೆ ದೇಶಾದ್ಯಂತ 200 ಹೊಸ ರೈಲು ಮಾರ್ಗಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. 

ನವದೆಹಲಿ: ಕರ್ನಾಟಕದಲ್ಲಿ 16 ಸೇರಿದಂತೆ ದೇಶಾದ್ಯಂತ 200 ಹೊಸ ರೈಲು ಮಾರ್ಗಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ. 

ಪ್ರಶ್ನೋತ್ತರ ಕಲಾಪದಲ್ಲಿ ಈ ವಿಷಯ ತಿಳಿಸಿದ ರೈಲ್ವೆ ಖಾತೆ ರಾಜ್ಯ ಸಚಿವ ರಾಜನ್ ಗೊಹೇನ್, ರಾಜ್ಯವಾರು ರೈಲು ಮಾರ್ಗಗಳ ಹಂಚಿಕೆಯ ಮಾಹಿತಿ ನೀಡಿದರು. 

ಈ ಮಾರ್ಗಗಳ ನಿರ್ಮಾಣ ಈಗ ವಿವಿಧ ಹಂತದಲ್ಲಿ ಪ್ರಗತಿಯಲ್ಲಿದೆ. ಇದಕ್ಕಾಗಿ ಭೂಸ್ವಾಧೀನ, ಅರಣ್ಯ ಇಲಾಖೆ ಅನುಮತಿ ಸೇರಿದಂತೆ ಹಲವು ಷರತ್ತುಗಳನ್ನು ಪೂರೈಸಬೇಕಿದೆ ಎಂದರು.

loader