ನವದೆಹಲಿ (ಸೆ. 25): ದೆಹಲಿ-ಲಖನೌ ನಡುವೆ ಸಂಚರಿಸುವ ರೈಲನ್ನು ಖಾಸಗಿ ನಿರ್ವವಣೆಗೆನೀಡುವ ನಿರ್ಧಾರ ಕೈಗೊಂಡಿದ್ದ ಭಾರತೀಯ ರೈಲ್ವೆ, ಶೀಘ್ರವೇ ದೇಶಾದ್ಯಂತ ಇಂಥ ಖಾಸಗಿ ರೈಲುಗಳನ್ನು ಓಡಿಸಲು ಮುಂದಾಗಿದೆ.  

ನಿಮ್ಮ ನಿಮ್ಮ ವಲಯಗಳಲ್ಲಿ ಯಾವ್ಯಾವ ಮಾರ್ಗಗಳಲ್ಲಿ ದೂರದ ರೈಲುಗಳು, ಅಂತರ್ ನಗರ ಮತ್ತು ಉಪನಗರ ರೈಲು ಸೇವೆಗಳನ್ನು ಖಾಸಗಿಗೆ ವಹಿಸಬಹದು ಎಂಬುದರ ಮಾಹಿತಿ ನೀಡಿ ಕೇಂದ್ರ ಕೇಂದ್ರೀಯ ರೈಲ್ವೆ ಮಂಡಳಿಯ ಎಲ್ಲಾ 17 ರೈಲ್ವೆ ವಿಭಾಗಗಳಿಗೆ ಪತ್ರ ಬರೆದಿದೆ. ಸೆ.23 ರಂದು ಈ ಕುರಿತು ಪತ್ರ ಬರೆದಿರುವ ರೈಲ್ವೆ ಮಂಡಳಿ, ಪ್ರತಿ ವಿಭಾಗವೂ ಕನಿಷ್ಠ 24 ಮಾರ್ಗಗಳ ಪಟ್ಟಿ ನೀಡಬೇಕು ಎಂದು ಸೂಚಿಸಿದೆ.

ಅಲ್ಲದೇ ದಿನದ ಇಪ್ಪತ್ತ ನಾಲ್ಕು ಗಂಟೆಯೂ ಪ್ರಮುಖ ನಗರಗಳನ್ನು ಸಂಪರ್ಕಿಸುವ ರೈಲುಗಳನ್ನು ಬಿಡ್ ಮೂಲಕ ಖಾಸಗಿಯವರಿಗೆ ವಹಿಸಲಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ದೆಹಲಿ ಲಖನೌ ತೇಜಸ್ ಎಕ್ಸ್‌ಪ್ರೆಸ್ ಅನ್ನು ಐಆರ್‌ಸಿಟಿ ವಹಿಸಲಾಗಿದ್ದು, ಅ.5 ರಿಂದ ಹಳಿಗೆ ಇಳಿಯಲಿದೆ.