ಭಾರತೀಯ ರೈಲ್ವೆ ಇಲಾಖೆ ತನ್ನ ಟಿಕೆಟ್ ದರದಲ್ಲಿ ವಿವಿಧ ವಿನಾಯಿತಿ ನೀಡುತ್ತ ಬಂದಿದೆ. ಆದರೆ ಎಲ್ಲ ವಿನಾಯಿತಿ ಅಥವಾ ರಿಯಾಯಿತಿಗಳ ವಿವರ ನಮಗೆ ಗೊತ್ತಿರಲೂ ಸಾಧ್ಯವಿಲ್ಲ. ಈ ವರದಿಯಲ್ಲಿ ಹಣ ಕಡಿತದ ನಿಯಮಾವಳಿ ಏನೇನು?ಎಂಬುದರ ಮೇಲೆ ಒಂದು ನೋಟ ಇದೆ.#

ನವದೆಹಲಿ(ಜೂ.26) ಭಾರತೀಯ ರೈಲ್ವೆ ಇಲಾಖೆ ತನ್ನ ಟಿಕೆಟ್ ದರದಲ್ಲಿ ವಿವಿಧ ವಿನಾಯಿತಿ ನೀಡುತ್ತ ಬಂದಿದೆ. ಆದರೆ ಎಲ್ಲ ವಿನಾಯಿತಿ ಅಥವಾ ರಿಯಾಯಿತಿಗಳ ವಿವರ ನಮಗೆ ಗೊತ್ತಿರಲೂ ಸಾಧ್ಯವಿಲ್ಲ. ಈ ವರದಿಯಲ್ಲಿ ಹಣ ಕಡಿತದ ನಿಯಮಾವಳಿ ಏನೇನು?ಎಂಬುದರ ಮೇಲೆ ಒಂದು ನೋಟ ಇದೆ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತೀಯ ರೈಲ್ವೆ ಶೇ 25 ರಿಂದ ಶೇ. 100 ವರೆಗೂ ಕೆಲವೊಮ್ಮೆ ರಿಯಾಯಿತಿ ನೀಡುತ್ತದೆ. ದೇಶ ಕಾಪಾಡಲು ಪ್ರಾಣ ತ್ಯಾಗ ಮಾಡಿದ ಸೈನಿಕರ ಹೆಂಡತಿಯರು, ರೋಗಿಗಳು, ಹಿರಿಯ ನಾಗರಿಕರು, ಅಂಗವಿಕಲರು, ವಿದ್ಯಾರ್ಥಿಗಳು ಹೀಗೆ ವಿವಿಧ ವರ್ಗದ ಜನರಿಗೆ ರಿಯಾಯಿತಿ ಲಭ್ಯವಾಗುತ್ತದೆ. ಐಆರ್ ಸಿಟಿಸಿಯಲ್ಲಿ ಹಿರಿಯ ನಾಗರಿಕರಿಗೆ ಮಾತ್ರ ರಿಯಾಯಿತಿ ಲಭ್ಯವಿದ್ದರೆ ಕೌಂಟರ್ ಗಳಲ್ಲಿ ಉಳಿದವರು ಹಣ ಉಳಿತಾಯದ ಲಾಭ ಪಡೆದುಕೊಳ್ಳಹುದು.

ಈ ಅಂಶಗಳ ಮೇಲೆ ಕಣ್ಣು ಹಾಯಿಸುವುದು ಪ್ರಮುಖ

*ಎಲ್ಲ ಬಗೆಯ ರಿಯಾಯಿತಿಯನ್ನು ನಿರ್ದಿಷ್ಟ ರೈಲ್ವೆ ಮತ್ತು ದರದ ಆಧಾರದಲ್ಲಿಯೆ ಲೆಕ್ಕಹಾಕುವುದು.

* ರಿಯಾಯಿತಿಯನ್ನು ಮೂಲ ದರದ ಆಧಾರದಲ್ಲಿಯೇ ನೀಡಲಾಗುವುದು. ಸರ್ ಚಾರ್ಜ್, ರಿಸರ್ವೇಶನ್ ಫಿ ಮುಂತಾದವುಗಳಿಗೆ ರಿಯಾಯಿತಿ ಅನ್ವಯಿಸುವುದಿಲ್ಲ.
* ಕೇವಲ ಒಬ್ಬ ವ್ಯಕ್ತಿಗೆ ಒಂದೇ ಬಗೆಯ ರಿಯಾಯಿತಿ ಲಭ್ಯವಾಗುತ್ತದೆ. ಯಾವ ಬಗೆಯ ರಿಯಾಯಿತಿ ಬೇಕು ಎಂದು ಪ್ರಯಾಣಿಕನೇ ಆಯ್ಕೆ ಮಾಡಿಕೊಳ್ಳಬಹುದು.
* ಬ್ರೇಕ್ ಅಪ್ ಜರ್ನಿ ಅಥವಾ ಒಂದು ರೈಲಿನಿಂದ ಮತ್ತೊಂದು ರೈಲಿಗೆ ಪ್ರಯಾಣವನ್ನು ಮಧ್ಯ ಬದಲಾಯಿಸುವುದಿದ್ದರೆ ರಿಯಾಯಿತಿ ಸಿಗಲ್ಲ.
* ಹಿರಿಯ ನಾಗರಿಕರನ್ನು ಹೊರತುಪಡಿಸಿ ಉಳಿದವರು ರಿಯಾಯಿತಿ ಪಡೆದುಕೊಳ್ಳಬೇಕಾದರೆ ಸಂಬಂಧಿಸಿದವರಿಂದ ಒಂದು ವಿನಂತಿ ಪತ್ರ ಪಡೆಡದುಕೊಳ್ಳಬೇಕಾಗುತ್ತದೆ.
* ಒಂದು ಬಾರಿ ಪಡೆದುಕೊಂಡ ರಿಯಾಯಿತಿ ಟಿಕೇಟನ್ನು ಬದಲಾಯಿಸಲು ಸಾಧ್ಯವಿಲ್ಲ. ಅಲ್ಲದೇ ವರ್ಗಾವಣೆ ಮಾಡಲು ಸಾಧ್ಯವಿಲ್ಲ.
* ಹಬ್ಬ ಮತ್ತು ಹರಿದಿನಗಳ ಸಂದರ್ಭ ಹೊರಡುವ ವಿಶೇಷ ರೈಲುಗಳಿಗೆ ರಿಯಾಯಿತಿ ಅನ್ವಯವಾಗುವುದಿಲ್ಲ.