ನವದೆಹಲಿ[ ಆ. 11]  ಭಾರತದ ಅಂತಾರಾಷ್ಟ್ರೀಯ ಗಡಿ ತನಕ ಸಾಗುತ್ತಿದ್ದ ಸಂಜೌತ ಎಕ್ಸ್ ಪ್ರೆಸ್ ರೈಲನ್ನು ರದ್ದು ಮಾಡಲಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದ್ದು ಸದ್ದಿಲ್ಲದೆ ಏಟು ನೀಡಿದೆ.

ಸಂಜೌತ ಎಕ್ಸ್ ಪ್ರೆಸ್ ಭಾನುವಾರಗಳಂದು ದೆಹಲಿಯಿಂದ ಅಟ್ಟಾರಿ ತನಕ ತೆರಳಿ, ವಾಪಸಾಗುತ್ತಿತ್ತು. ಇನ್ನು ಪಾಕಿಸ್ತಾನವು ಲಾಹೋರ್ ನಿಂದ ಅಟ್ಟಾರಿ ತನಕ ರೈಲು ಸೇವೆ ಒದಗಿಸಿತ್ತು. ಅಟ್ಟಾರಿ ನಿಲ್ದಾಣದಲ್ಲಿ ಪ್ರಯಾಣಿಕರು ರೈಲು ಬದಲಾವಣೆ ಮಾಡಿಕೊಳ್ಳುತ್ತಿದ್ದರು.

ಲಾಹೋರ್ ಮತ್ತು ಅಟ್ಟಾರಿ ಮಧ್ಯೆ ಸಂಚರಿಸುತ್ತಿದ್ದ ಸಂಜೌತ ಎಕ್ಸ್ ಪ್ರೆಸ್ ಸಂಖ್ಯೆ 14607/14608 ಅನ್ನು ಪಾಕಿಸ್ತಾನವು ಸ್ಥಗಿತಗೊಳಿಸಿದ ಮೇಲೆ ಆ ರೈಲಿಗೆ ಹೊಂದಿಕೊಂಡಂತೆ ದೆಹಲಿ- ಆಟ್ಟಾರಿ ಮಧ್ಯೆ ಚಲಿಸುತ್ತಿದ್ದ ರೈಲು ಸಂಖ್ಯೆ 14001/14002 ಅನ್ನು ರದ್ದು ಮಾಡಲಾಗಿದೆ ಎಂದು ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.

ಹಲವಾರು ಬಾಲಿವುಡ್ ಸಿನಿಮಾಗಳಲ್ಲಿಯೂ ಸಂಜೌತ ರೈಲನ್ನು ಇಟ್ಟುಕೊಂಡೆ ಕತೆ ಹಣೆಯಲಾಗಿದ್ದು ಕಾಣಬಹುದು.