ಒಂದು ಗಂಟೆ ನಿದ್ರಾವಧಿ ಕಡಿಮೆ ಮಾಡಿದ್ದು ಯಾಕೆ? ರೈಲಿನಲ್ಲಿ ಜಗಳ ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಕೆಳಗಿನ ಸೀಟ್'ನ್ನು ಬುಕ್ ಮಾಡಿದ ವ್ಯಕ್ತಿ ಬೇಗ ಮಲಗಿದರೆ ಮಧ್ಯದ ಮತ್ತು ಮೇಲಿನ ಸೀಟಿನವರು ಅನಿವಾರ್ಯವಾಗಿ ತಮ್ಮ ಸೀಟಿಗೆ ಹೋಗಿ ಮಲಬೇಕಾಗುತ್ತದೆ. ಬೇಗ ಮಲಗಲು ಇಷ್ಟವಿಲ್ಲದವರಿಗೆ ಇದು ಸ್ವಲ್ಪ ಕಿರಿಕಿರಿಯಾಗುತ್ತದೆ. ಇದರಿಂದಾಗಿ, ಪ್ರಯಾಣಿಕರ ನಡುವೆ ವಾಗ್ವಾದಗಳಾವುದು ರೈಲುಗಳಲ್ಲಿ ಸಾಮಾನ್ಯವಾಗಿಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಈ ಕ್ರಮ ಕೈಗೊಂಡಿದೆ.
ನವದೆಹಲಿ(ಸೆ. 17): ರಿಸರ್ವ್ ಬೋಗಿಯಲ್ಲಿ ಪ್ರಯಾಣಿಸುವ ರೈಲ್ವೆ ಪ್ರಯಾಣಿಕರು ಹೆಚ್ಚು ಹೊತ್ತು ಮಲಗುವಂತಿಲ್ಲ. ರೈಲು ಪ್ರಯಾಣಿಕರು ರೈಲಿನಲ್ಲಿ ಮಲಗುವ ಅವಧಿಯನ್ನು ಒಂದು ಗಂಟೆ ಕಡಿಮೆ ಮಾಡಿ ಭಾರತೀಯ ರೈಲ್ವೆ ಅಧಿಸೂಚನೆ ಹೊರಡಿಸಿದೆ. ರಾತ್ರಿ 10ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಮಾತ್ರ ಅವರು ಮಲಗಬಹುದು. ಈ ಮುಂಚೆ ಪ್ರಯಾಣಿಕರು ಇಚ್ಛಿಸಿದರೆ ರಾತ್ರಿ 9ಕ್ಕೇ ಮಲಗಬಹುದಿತ್ತು.
ಒಂದು ಗಂಟೆ ನಿದ್ರಾವಧಿ ಕಡಿಮೆ ಮಾಡಿದ್ದು ಯಾಕೆ? ರೈಲಿನಲ್ಲಿ ಜಗಳ ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಕೆಳಗಿನ ಸೀಟ್'ನ್ನು ಬುಕ್ ಮಾಡಿದ ವ್ಯಕ್ತಿ ಬೇಗ ಮಲಗಿದರೆ ಮಧ್ಯದ ಮತ್ತು ಮೇಲಿನ ಸೀಟಿನವರು ಅನಿವಾರ್ಯವಾಗಿ ತಮ್ಮ ಸೀಟಿಗೆ ಹೋಗಿ ಮಲಬೇಕಾಗುತ್ತದೆ. ಬೇಗ ಮಲಗಲು ಇಷ್ಟವಿಲ್ಲದವರಿಗೆ ಇದು ಸ್ವಲ್ಪ ಕಿರಿಕಿರಿಯಾಗುತ್ತದೆ. ಇದರಿಂದಾಗಿ, ಪ್ರಯಾಣಿಕರ ನಡುವೆ ವಾಗ್ವಾದಗಳಾವುದು ರೈಲುಗಳಲ್ಲಿ ಸಾಮಾನ್ಯವಾಗಿಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಈ ಕ್ರಮ ಕೈಗೊಂಡಿದೆ. ಆದರೆ, ವಯೋವೃದ್ಧರು, ಗರ್ಭಿಣಿಯರು, ಅಂಗವಿಕಲರು ಹೆಚ್ಚು ಹೊತ್ತು ಮಲಗಲು ಬಯಸಿದರೆ ಅದಕ್ಕೆ ಅನುವು ಮಾಡಿಕೊಡಬೇಕೆಂದು ಸಾಮಾನ್ಯ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಮನವಿ ಮಾಡಿಕೊಂಡಿದೆ.
ಈ ನಿಯಮಗಳು ಸ್ಲೀಪಿಂಗ್ ಕೋಚ್ ಇರುವ ಟ್ರೈನುಗಳಿಗೆ ಅನ್ವಯ.
