Asianet Suvarna News Asianet Suvarna News

ಐಸಿಎಸ್ ಉಗ್ರಗಾಮಿಗಳಿಂದ ಅಪಹರಕ್ಕೊಳಗಾಳಗಾಗಿದ್ದ ಕೇರಳ ಪಾದ್ರಿ ರಕ್ಷಣೆ

ಯೆಮೆನ್'ನಲ್ಲಿ  ಉಗ್ರಗಾಮಿಗಳಿಂದ ಅಪಹರಣಕ್ಕೊಳಗಾಗಿದ್ದ ಕೇರಳ ಮೂಲದ ಕ್ರಿಶ್ಚಿಯನ್ ಪಾದ್ರಿ ಟಾಮ್ ಉಜುನ್ನಳ್ಳಿ ಎಂಬುವವರನ್ನು 17 ತಿಂಗಳ ನಂತರ ರಕ್ಷಿಸಲಾಗಿದ್ದು ಅವರೀಗ ಸುರಕ್ಷಿತರಾಗಿದ್ದಾರೆ. ಇಂದು ರಾತ್ರಿ ಕೇರಳಕ್ಕೆ ವಾಪಸ್ಸಾಗಲಿದ್ದಾರೆ.

Indian priest Tom Uzhunnalil  kidnapped by ISIS terrorists in Yemen freed  announces Sushma Swaraj

ನವದೆಹಲಿ (ಸೆ.12): ಯೆಮೆನ್'ನಲ್ಲಿ  ಉಗ್ರಗಾಮಿಗಳಿಂದ ಅಪಹರಣಕ್ಕೊಳಗಾಗಿದ್ದ ಕೇರಳ ಮೂಲದ ಕ್ರಿಶ್ಚಿಯನ್ ಪಾದ್ರಿ ಟಾಮ್ ಉಜುನ್ನಳ್ಳಿ ಎಂಬುವವರನ್ನು 17 ತಿಂಗಳ ನಂತರ ರಕ್ಷಿಸಲಾಗಿದ್ದು ಅವರೀಗ ಸುರಕ್ಷಿತರಾಗಿದ್ದಾರೆ. ಇಂದು ರಾತ್ರಿ ಕೇರಳಕ್ಕೆ ವಾಪಸ್ಸಾಗಲಿದ್ದಾರೆ.

2016 ರಲ್ಲಿ ಐಎಸ್’ಐಎಸ್ ಸಂಘಟನೆಯು ವೃದ್ಧಾಶ್ರಮದ ಮೇಲೆ ದಾಳಿ ಸುಮಾರು 15 ಮಂದಿಯನ್ನು ಕೊಲ್ಲಲಾಗಿತ್ತು. ಈ ಸಂದರ್ಭದಲ್ಲಿ ಕೇರಳ ಮೂಲದ ಪಾದ್ರಿ ಉಜುನ್ನಳ್ಳಿ ಅವರನ್ನು ಉಗ್ರಗಾಮಿಗಳು ಬಂದಿಸಿದ್ದರು. ಓಮನ್ ವಿದೇಶಾಂಗ ಸಚಿವಾಲಯ ಹಾಗೂ ಯೆಮಿನಿ ಅಧಿಕಾರಿಗಳ ಸತತ ಪ್ರಯತ್ನದಿಂದ ಪಾದ್ರಿಯವರನ್ನು ಉಗ್ರಗಾಮಿಗಳಿಂದ ರಕ್ಷಿಸಲಾಗಿದ್ದು, ಅವರೀಗ ಮಸ್ಕಟ್’ನಲ್ಲಿದ್ದಾರೆ. ಇಂದು ರಾತ್ರಿ ಕೇರಳಕ್ಕೆ ವಾಪಸ್ಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಫಾದರ್ ಟಾಮ್ ಉಜುನ್ನಳ್ಳಿ ಅವರನ್ನು ಉಗ್ರಗಾಮಿಗಳಿಂದ ರಕ್ಷಿಸಲಾಗಿದೆ ಎನ್ನುವುದಕ್ಕೆ ಸಂತೋಷವಾಗುತ್ತಿದೆ ಎಂದು ಟ್ವೀಟಿಸಿದ್ದಾರೆ. ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಕೂಡಾ ಪಾದ್ರಿಯವರ ಬಿಡುಗಡೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅವರ ಬಿಡುಗಡೆಯಲ್ಲಿ ಓಮನ್ ಮಹತ್ತರ ಪಾತ್ರ ವಹಿಸಿದೆ ಎಂದು ವಿಜಯನ್ ಹೇಳಿದ್ದಾರೆ.

 

 

Follow Us:
Download App:
  • android
  • ios