'ನೀನೊಬ್ಬ ಭಾರತೀಯ, ಹಿಂದು ಅಥವಾ ಮುಸ್ಲಿಂ ಆಗಿರುತ್ತೀಯ, ಚರ್ಚ್'ನಲ್ಲಿ ಪಾರ್ಥನೆ ಮಾಡುವಂತಿಲ್ಲ' ಎಂದು ಜೋರಾಗಿ ಕೂಗಿ ಚಾಕುವಿನಿಂದ ಇರಿದಿದ್ದಾನೆ.
ಕಲ್ಲಿಕೋಟೆ(ಮಾ.20): ಆಸ್ಟ್ರೇಲಿಯಾದ ಮೆಲ್ಬೋರ್ನ್'ನಲ್ಲಿ ಭಾರತೀಯ ಮೂಲದ ಪಾದ್ರಿಯೊಬ್ಬರಿಗೆ ಅಪರಿಚಿತನೊಬ್ಬ ಚೂರಿಯಿಂದ ಇರಿದಿದ್ದಾನೆ.
48 ವಯಸ್ಸಿನ ಟಾಮಿ ಕಲಾತೂರ್ ಮ್ಯಾಥ್ಯೂ ಎಂಬುವವರಿಗೆ ಮೆಲ್ಬೋರ್ನ್'ನ ಉತ್ತರ ಭಾಗದಲ್ಲಿರುವ ಫಾಕ್'ನೇರ್'ನಲ್ಲಿರುವ ಸೇ.ಮ್ಯಾಥ್ಯೊ ಚರ್ಚ್'ನ ಒಳಗಡೆ ನಿನ್ನೆ ರಾತ್ರಿ 11 ಗಂಟೆಗೆ ಆಗಮಿಸಿದ ಅಪರಿಚನೊಬ್ಬ ಪಾದ್ರಿಗೆ 'ನೀನೊಬ್ಬ ಭಾರತೀಯ, ಹಿಂದು ಅಥವಾ ಮುಸ್ಲಿಂ ಆಗಿರುತ್ತೀಯ, ಚರ್ಚ್'ನಲ್ಲಿ ಪಾರ್ಥನೆ ಮಾಡುವಂತಿಲ್ಲ' ಎಂದು ಜೋರಾಗಿ ಕೂಗಿ ಚಾಕುವಿನಿಂದ ಇರಿದಿದ್ದಾನೆ.
ತೀವ್ರ ಗಾಯಗೊಂಡ ಪಾದ್ರಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾರತದ ಕಲ್ಲಿಕೋಟೆಯವರಾದ ಇವರು ಕೇರಳದ ಹಲವು ಚರ್ಚ್'ಗಳಲ್ಲಿ ಶಿಕ್ಷಕರಾಗಿದ್ದರು. ನಂತರ ಮೆಲ್ಬೋರ್ನ್ ಚರ್ಚ್'ನಲ್ಲಿ 2014ರಿಂದ ಪಾದ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
