ಟ್ರಂಪ್‌ಗಾಗಿ 38000 ರು. ಬಾಡಿಗೆಯ ಹೋಟೆಲ್‌ನಲ್ಲಿ ಭಾರತೀಯನ ವಾಸ!

Indian-origin spends Rs 38,000 for 1-night stay at hotel to meet Trump in Singapore
Highlights

ಟ್ರಂಪ್‌ರನ್ನು ಭೇಟಿ ಮಾಡುವ ಅವಕಾಶ ಲಭ್ಯವಾಗುತ್ತದೆ ಎಂಬ ಕಾರಣಕ್ಕಾಗಿ ಹೋಟೆಲ್‌ನಲ್ಲಿ ಒಂದು ರಾತ್ರಿ ತಂಗಲು ಭಾರತ ಮೂಲದ ವ್ಯಕ್ತಿಯೋರ್ವ ಬರೋಬ್ಬರಿ 38 ಸಾವಿರ ರು. ಖರ್ಚು ಮಾಡಿದ್ದಾರೆ. ಅಲ್ಲದೆ, ಟ್ರಂಪ್‌ ಅವರ ಚಲನ ವಲನಗಳನ್ನು ವೀಕ್ಷಿಸಬೇಕು ಎಂಬ ಕಾರಣಕ್ಕಾಗಿ ಬೆಳಗ್ಗೆ 6.30ರಿಂದ ಸುಮಾರು 5 ತಾಸು ತನ್ನ ಕೊಠಡಿಯ ಮೊಗಸಾಲೆಯಲ್ಲೇ ನಿಂತಿದ್ದರು. ಜೊತೆಗೆ ಟ್ರಂಪರ್‌ ಬೀಸ್ಟ್‌ ಕಾರಿನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಭದ್ರತಾ ಸಿಬ್ಬಂದಿಯಿಂದ ಬೈಸಿಕೊಂಡಿದ್ದಾರೆ. 

ಸಿಂಗಾಪುರ (ಜೂ. 13):  ಟ್ರಂಪ್‌ರನ್ನು ಭೇಟಿ ಮಾಡುವ ಅವಕಾಶ ಲಭ್ಯವಾಗುತ್ತದೆ ಎಂಬ ಕಾರಣಕ್ಕಾಗಿ ಹೋಟೆಲ್‌ನಲ್ಲಿ ಒಂದು ರಾತ್ರಿ ತಂಗಲು ಭಾರತ ಮೂಲದ ವ್ಯಕ್ತಿಯೋರ್ವ ಬರೋಬ್ಬರಿ 38 ಸಾವಿರ ರು. ಖರ್ಚು ಮಾಡಿದ್ದಾರೆ.

ಮಂಗಳವಾರ ಟ್ರಂಪ್‌ ಮತ್ತು ಕಿಮ್‌ರ ಶೃಂಗವು ಇಲ್ಲಿನ ಶಾಂಗ್ರಿ-ಲಾ ಹೋಟೆಲ್‌ನಲ್ಲಿ ಆಯೋಜಿಸಲಾಗಿತ್ತು. ಇದೇ ಹೋಟೆಲ್‌ನಲ್ಲಿ ಭಾರತ ಮೂಲದ ಮಹಾರಾಜ್‌ ಮೋಹನ್‌(25) ಅವರು ಸೋಮವಾರದಿಂದಲೇ ಇದೇ ಹೋಟೆಲ್‌ನಲ್ಲಿ ಕೊಠಡಿ ಬುಕ್‌ ಮಾಡಿ, ತಂಗಿದ್ದರು. ಅಲ್ಲದೆ, ಟ್ರಂಪ್‌ ಅವರ ಚಲನ ವಲನಗಳನ್ನು ವೀಕ್ಷಿಸಬೇಕು ಎಂಬ ಕಾರಣಕ್ಕಾಗಿ ಬೆಳಗ್ಗೆ 6.30ರಿಂದ ಸುಮಾರು 5 ತಾಸು ತನ್ನ ಕೊಠಡಿಯ ಮೊಗಸಾಲೆಯಲ್ಲೇ ನಿಂತಿದ್ದರು. ಜೊತೆಗೆ ಟ್ರಂಪರ್‌ ಬೀಸ್ಟ್‌ ಕಾರಿನ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಭದ್ರತಾ ಸಿಬ್ಬಂದಿಯಿಂದ ಬೈಸಿಕೊಂಡಿದ್ದಾರೆ. 

loader