Asianet Suvarna News Asianet Suvarna News

ಭಾರತೀಯ ಮೂಲದ ವೈದ್ಯೆಗೆ ಮಿಸ್‌ ಇಂಗ್ಲೆಂಡ್‌ ಕಿರೀಟ!

ಭಾರತೀಯ ಮೂಲದ ವೈದ್ಯೆಗೆ ಮಿಸ್‌ ಇಂಗ್ಲೆಂಡ್‌ ಕಿರೀಟ| 23 ವರ್ಷದ ಮುಖ​ರ್ಜಿ 12 ಮಂದಿ ಸ್ಪರ್ಧಿ​ಗ​ಳನ್ನು ಮಣಿಸಿ ಪ್ರಶಸ್ತಿ ಮುಡಿ​ಗೇ​ರಿ​ಸಿ​ಕೊಂಡಿ​ದ್ದಾರೆ

Indian origin doctor Bhasha Mukherjee wins Miss England 2019 crown
Author
Bangalore, First Published Aug 4, 2019, 9:42 AM IST

ಲಂಡ​ನ್‌[ಆ.04]: ಭಾರ​ತೀಯ ಮೂಲದ ವೈದ್ಯೆ ಭಾಷಾ ಮುಖರ್ಜಿ ಮಿಸ್‌ ಇಂಗ್ಲೆಂಡ್‌ ಕಿರೀ​ಟಕ್ಕೆ ಭಾಜ​ನ​ರಾ​ಗಿ​ದ್ದಾರೆ. 23 ವರ್ಷದ ಮುಖ​ರ್ಜಿ 12 ಮಂದಿ ಸ್ಪರ್ಧಿ​ಗ​ಳನ್ನು ಮಣಿಸಿ ಪ್ರಶಸ್ತಿ ಮುಡಿ​ಗೇ​ರಿ​ಸಿ​ಕೊಂಡಿ​ದ್ದಾರೆ.

ನಾಟಿಂಗ್‌​ಹ್ಯಾಮ್‌ ವಿಶ್ವ​ವಿ​ದ್ಯಾ​ನಿ​ಲ​ಯ​ದಿಂದ ವೈದ್ಯ​ಕೀಯ ವಿಜ್ಞಾನ ಹಾಗೂ ಔಷಧಿ ಮತ್ತು ಶಸ್ತ್ರಚಿ​ಕಿತ್ಸೆ ವಿಷ​ಯ​ದ​ಲ್ಲಿ ಪದ​ವಿ​ ಪಡೆ​ದಿರುವ ಭಾಷಾ, ಐದು ಭಾಷೆ​ಗ​ಳಲ್ಲಿ ಪ್ರಾವೀ​ಣ್ಯತೆ ಹೊಂದಿ​ದ್ದಾರೆ.

ಸ್ಪರ್ಧೆ​ಯಲ್ಲಿ ವಿಜೇ​ತ​ರಾದ ಬಳಿಕ ಮಾತ​ನಾ​ಡಿದ ಅವರು, ನಾನು ಮಾಧ್ಯ​ಮಿಕ ಶಾಲೆ​ಯ​ಲ್ಲಿ​ರು​ವಾ​ಗಲೇ ಮಾಡೆ​ಲಿಂಗ್‌ ಆಯ್ಕೆ ಮಾಡಿ​ಕೊಂಡೆ. ನನ್ನ ವಿದ್ಯಾ​ಭ್ಯಾಸದೊಂದಿಗೆ ಮಾಡೆ​ಲಿಂಗ್‌ ಅನ್ನು ಸಮ​ತೋ​ಲ​ನ​ಗೊ​ಳಿ​ಸಬಹುದು ಎಂದು ತಿಳಿದ ಬಳಿಕ ನಾನು ವೃತ್ತಿ​ಯಲ್ಲಿ ಮುಂದಡಿ ಇಟ್ಟೆ. ಸ್ಪರ್ಧೆ​ಯಲ್ಲಿ ಗೆದ್ದ ಬಳಿಕ ಗಾಳಿ​ಯಲ್ಲಿ ತೇಲಿ​ದಂತೆ ನಡೆ​ದು​ಕೊ​ಳ್ಳುತ್ತೇವೆ ಎಂದು ಕೆಲ​ವರು ಭಾವಿ​ಸ​ಬ​ಹುದು, ಆದರೆ ನಾವು ಅನಿ​ವಾರ್ಯ ಸಂದ​ರ್ಭ​ಗ​ಳಲ್ಲಿ ಬೇಕಾ​ದ​ವ​ರಿಗೆ ಬೆಂಬ​ಲ​ವಾಗಿ ನಿಲ್ಲು​ತ್ತೇವೆ ಎಂದು ಹೇಳಿ​ದ್ದಾರೆ. ಮಿಸ್‌ ಇಂಗ್ಲೆಂಡ್‌ ಪ್ರಶಸ್ತಿ ಗೆದ್ದಿ​ರು​ವು​ದ​ರಿಂದ ಮಿಸ್‌ ವರ್ಲ್ಡ್ ಸ್ಪರ್ಧೆಗೆ ನೇರವಾಗಿ ಆಯ್ಕೆ​ಯಾ​ಗ​ಲಿ​ದ್ದಾರೆ.

Follow Us:
Download App:
  • android
  • ios