ಹರ್ನೀಶ್ ಪಟೇಲ್ ಕೊಲೆಯಾದ ಉದ್ಯಮಿ. ಗುರುವಾರ ರಾತ್ರಿ 11.30ರ ಸಮಯದಲ್ಲಿ ಹರ್ನೀಶ್ ದಕ್ಷಿಣ ಕ್ಯಾಲಿಫೋರ್ನಿಯ'ದಲ್ಲಿರುವ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ವಾಪಸ್ ಆಗುತ್ತಿದ್ದಾಗ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ನ್ಯೂಯಾರ್ಕ್(ಮಾ.04): ಕಳೆದ ವಾರವಷ್ಟೆ ಜನಾಂಗೀಯ ದ್ವೇಷಕ್ಕೆ ಭಾರತೀಯ ಮೂಲದ ಟೆಕ್ಕಿ ಶ್ರೀನಿವಾಸ ಕುಚಿಬೋತ್ಲಾ'ನನ್ನು ಮಾಜಿ ಸೈನಿಕನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದ. ಈಗ ಮತ್ತೊಬ್ಬ ಭಾರತೀಯ ಮೂಲದ ಉದ್ಯಮಿಯನ್ನು ದುಷ್ಕರ್ಮಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಹರ್ನೀಶ್ ಪಟೇಲ್ ಕೊಲೆಯಾದ ಉದ್ಯಮಿ. ಗುರುವಾರ ರಾತ್ರಿ 11.30ರ ಸಮಯದಲ್ಲಿ ಹರ್ನೀಶ್ ದಕ್ಷಿಣ ಕ್ಯಾಲಿಫೋರ್ನಿಯ'ದಲ್ಲಿರುವ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ವಾಪಸ್ ಆಗುತ್ತಿದ್ದಾಗ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಮೇಲ್ನೋಟಕ್ಕೆ ಈ ಕೊಲೆ ಜನಾಂಗೀಯ ದ್ವೇಷಕ್ಕೆ ನಡೆದ ಕೊಲೆಯಲ್ಲ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.
ಫೆ.22ರಂದು ಭಾರತೀಯ ಟೆಕ್ಕಿ ಶ್ರೀನಿವಾಸ್ ಜನಾಂಗೀಯ ದ್ವೇಷಕ್ಕೆ ಬಲಿಯಾಗಿದ್ದರು. ಹತ್ಯೆಯನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವರು ಖಂಡಿಸಿದ್ದರು.
