ಹಿಂದು ಮಹಾಸಾಗರದಲ್ಲಿ ಬೇರುಬಿಡಲು ಚೀನಾ ಪ್ರಯತ್ನಿಸುತ್ತಿರುವಾಗಲೇ, ಬರೋಬ್ಬರಿ 1.6 ಲಕ್ಷ ಕೋಟಿ ರು. ವೆಚ್ಚದಲ್ಲಿ ತನಗೆ 3ನೇ ಯುದ್ಧ ವಿಮಾನ ನೌಕೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ನೌಕಾಪಡೆ ಸಜ್ಜಾಗುತ್ತಿದೆ.

ನವದೆಹಲಿ: ಹಿಂದು ಮಹಾಸಾಗರದಲ್ಲಿ ಬೇರುಬಿಡಲು ಚೀನಾ ಪ್ರಯತ್ನಿಸುತ್ತಿರುವಾಗಲೇ, ಬರೋಬ್ಬರಿ 1.6 ಲಕ್ಷ ಕೋಟಿ ರು. ವೆಚ್ಚದಲ್ಲಿ ತನಗೆ 3ನೇ ಯುದ್ಧ ವಿಮಾನ ನೌಕೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ನೌಕಾಪಡೆ ಸಜ್ಜಾಗುತ್ತಿದೆ.

ಸದ್ಯ ನೌಕಾಪಡೆಯ ಬಳಿ ಐಎನ್‌ಎಸ್ ವಿಕ್ರಮಾದಿತ್ಯ ನೌಕೆ ಹಾಲಿ ಸೇವೆಯಲ್ಲಿದೆ. ಮತ್ತೊಂದು ನೌಕೆಯಾದ ಐಎನ್‌ಎಸ್ ವಿರಾಟ್ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದು, ಅದು ಸೇವೆಗೆ ಸೇರ್ಪಡೆಯಾಗಲು ಕೆಲ ವರ್ಷಗಳೇ ಬೇಕಾಗುತ್ತವೆ. ಇದರ ಮಧ್ಯೆ, 57 ಯುದ್ಧ ವಿಮಾನಗಳನ್ನು ಹೊಂದಿದ ನೌಕೆ ತನಗೆ ಬೇಕು ಎಂಬ ಪ್ರಸ್ತಾವವನ್ನು ರಕ್ಷಣಾ ಸಚಿವಾಲಯದ ಮುಂದಿಡಲು ನೌಕಾ ಪಡೆ ಚಿಂತನೆಯಲ್ಲಿದೆ.

ಯುದ್ಧ ವಿಮಾನ ಸಹಿತ ಈ ನೌಕೆಗೆ 1.6 ಲಕ್ಷ ಕೋಟಿ ರು. ವೆಚ್ಚವಾಗುವ ಅಂದಾಜಿದೆ. 70 ಸಾವಿರ ಕೋಟಿ ರು. ವೆಚ್ಚದ ಯುದ್ಧ ನೌಕೆಗೆ ನೌಕಾಪಡೆ ಪ್ರಸ್ತಾವ ಇಡಲಿದೆ.