ಭಾರತೀಯ ಸಾಗರ ಪ್ರದೇಶಗಳಲ್ಲಿ ಸಂಚರಿಸುವ ಚೀನಾ ಹಡಗು ಹಾಗೂ ಸಬ್ ಮೆರಿನ್ ಚಲನವಲನಗಳ ಮೇಲೆ ಕಣ್ಣಿಡಲಾಗಿದೆ ಎಂದು ಭಾರತೀಯ ನೌಕಾದಳ ಹೇಳಿದೆ.

ನವದೆಹಲಿ (ಡಿ.02): ಭಾರತೀಯ ಸಾಗರ ಪ್ರದೇಶಗಳಲ್ಲಿ ಸಂಚರಿಸುವ ಚೀನಾ ಹಡಗು ಹಾಗೂ ಸಬ್ ಮೆರಿನ್ ಚಲನವಲನಗಳ ಮೇಲೆ ಕಣ್ಣಿಡಲಾಗಿದೆ ಎಂದು ಭಾರತೀಯ ನೌಕಾದಳ ಹೇಳಿದೆ.

ವಾರ್ಷಿಕ ‘ನೌಕಾದಿನ’ ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೌಕಾ ಮುಖ್ಯಸ್ಥ ಸುನೀಲ್ ಲುಂಬಾ, ಭಾರತೀಯ ಸಾಗರ ಪ್ರದೇಶಗಳಲ್ಲಿ ಚೀನಾ ಸಬ್ ಮೆರಿನ್'ಗಳು ಬೀಡು ಬಿಟ್ಟಿದೆ. ಅವುಗಳ ಚಲನವಲನಗಳ ಮೇಲೆ ಕಣ್ಗಾವಲಿಡಲಾಗಿದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಭಾರತೀಯ ಸಬ್ ಮೆರಿನ್ ಗಳು ಪಾಕ್ ಸಮುದ್ರಕ್ಕೆ ಪ್ರವೇಶಿಸಲು ಯತ್ನಿಸಿದ್ದವು ಎನ್ನುವ ಆರೋಪವನ್ನು ಪ್ರಸ್ತಾಪಿಸುತ್ತಾ ಪಾಕ್ ಆರೋಪದಲ್ಲಿ ಹುರುಳಿಲ್ಲ. ಭಾರತೀಯ ಸಬ್ ಮೆರಿನ್ ಗಳು ಪಾಕ್

ನಲ್ಲಿ ಬೀಡು ಬಿಟ್ಟಿರಲಿಲ್ಲ. ಇದು ಅಷ್ಟು ಸುಲಭವಲ್ಲ. ಪಾಕ್ ಸುಮ್ಮನೆ ಆರೋಪಿಸುತ್ತಿದೆ’ ಎಂದು ಸುನೀಲ್ ಲುಂಬಾ ಹೇಳಿದ್ದಾರೆ.