ಉದ್ಯೋಗ ಅರಸಿ ವಿದೇಶಕ್ಕೆ ತೆರಳಿದವರಿಗೆ ಕೈತುಂಬಾ ಸಂಬಳ ಸಿಗುವ ಕೆಲಸ ಸಿಕ್ಕಾಗ ಆಗುವ ಖುಷಿಗೆ ಪಾರವೇ ಇರೋದಿಲ್ಲ. ಇನ್ನು ರಾತ್ರೋ ರಾತ್ರಿ ಕೋಟ್ಯಂತರ ರು. ಮೌಲ್ಯದ ಲಾಟರಿ ಚೀಟಿ ಹೊಡೆದ್ರೆ, ಹೇಗಿರಬೇಡ.

ಹೌದು, ಉದ್ಯೋಗಕ್ಕಾಗಿ ದುಬೈಗೆ ತೆರಳಿದ್ದ ಭಾರತೀಯ ಪ್ರಶಾಂತ್ ಪಂಡರಾತಿಲ್ ಎಂಬುವರಿಗೆ 19.45 ಕೋಟಿ ರು. ಲಾಟರಿ ಹೊಡೆದಿದೆ. ಪ್ರತಿ ತಿಂಗಳು ಡ್ರಾ ಮಾಡುವ ಈ ಲಾಟರಿಗೆ ಕಾರು, ಲಕ್ಸುರಿ ಕಾರು ಸೇರಿ ಇತರ ಬಹುಮಾನಗಳನ್ನು ನಿಗದಿಪಡಿಸಲಾಗಿರುತ್ತದೆ.

ಇದೇ ವರ್ಷದ ಜನವರಿಯಲ್ಲಿ ಮತ್ತೋರ್ವ ಭಾರತೀಯ ಶರತ್ ಪುರುಷೋತ್ತಮನ್ ಎಂಬುವರಿಗೂ 25 ಕೋಟಿ ರು. ಲಾಟರಿ ಹೊಡೆದಿತು.