ಪ್ರಯಾಣಿಕರ ಮುಂದೆಯೇ ಈ ಕೃತ್ಯ ನಡೆದಿದ್ದು, ಐವರಿಗೆ ಸುಟ್ಟಗಾಯಗಳಾಗಿವೆ. ನಿಲ್ದಾಣವೊಂದರಲ್ಲಿ ಬಸ್ ನಿಂತಾಗ, ಬಸ್ ಚಾಲಕ ಮನ್‌ಮೀತ್ ಅಲಿಶರ್(29) ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಬೆಂಕಿ ಹೊತ್ತಿಸುವ ದ್ರವ ಎರಚಿದ್ದಾನೆ.
ಮೆಲ್ಬರ್ನ್(ಅ.29): ಪಂಜಾಬ್ ಮೂಲದ ಬಸ್ ಚಾಲಕನ ಮೇಲೆ ವ್ಯಕ್ತಿಯೊಬ್ಬ ದಹನಶೀಲ ರಾಸಾಯನಿಕವನ್ನು ಹಾಕಿ ಹತ್ಯೆಗೈದ ಘಟನೆ ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿ ನಡೆದಿದೆ. ಪ್ರಯಾಣಿಕರ ಮುಂದೆಯೇ ಈ ಕೃತ್ಯ ನಡೆದಿದ್ದು, ಐವರಿಗೆ ಸುಟ್ಟಗಾಯಗಳಾಗಿವೆ. ನಿಲ್ದಾಣವೊಂದರಲ್ಲಿ ಬಸ್ ನಿಂತಾಗ, ಬಸ್ ಚಾಲಕ ಮನ್ಮೀತ್ ಅಲಿಶರ್(29) ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಬೆಂಕಿ ಹೊತ್ತಿಸುವ ದ್ರವ ಎರಚಿದ್ದಾನೆ. ಪರಿಣಾಮ ಅಲಿಶರ್ ಬಸ್ಸಿನೊಳಗೇ ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ೪೮ ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅಲಿಶರ್ ಒಳ್ಳೆಯ ಗಾಯಕನಾಗಿದ್ದು, ಬ್ರಿಸ್ಬೇನ್ನ ಪಂಜಾಬಿ ಸಮುದಾಯದಲ್ಲಿ ಖ್ಯಾತಿ ಗಳಿಸಿದ್ದ.----
