ಭಾರತಕ್ಕೆ ಗಡೀಪಾರಾಗುವುದರಿಂದ ತಪ್ಪಿಸಿಕೊಳ್ಳಲು ನಾನಾ ಕಾರಣಗಳನ್ನು ಹುಡುಕುತ್ತಿರುವ ಹೆಂಡದ ದೊರೆ ವಿಜಯ ಮಲ್ಯ, ಈಗ ಭಾರತದ ನ್ಯಾಯಾಂಗ ವ್ಯವಸ್ಥೆ ಪಕ್ಷಪಾತಿಯಾಗಿದೆ ಎಂದು ಲಂಡನ್ ಕೋರ್ಟ್‌ನಲ್ಲಿ ಆರೋಪಿಸಿದ್ದಾರೆ.
ಲಂಡನ್: ಭಾರತಕ್ಕೆ ಗಡೀಪಾರಾಗುವುದರಿಂದ ತಪ್ಪಿಸಿಕೊಳ್ಳಲು ನಾನಾ ಕಾರಣಗಳನ್ನು ಹುಡುಕುತ್ತಿರುವ ಹೆಂಡದ ದೊರೆ ವಿಜಯ ಮಲ್ಯ, ಈಗ ಭಾರತದ ನ್ಯಾಯಾಂಗ ವ್ಯವಸ್ಥೆ ಪಕ್ಷಪಾತಿಯಾಗಿದೆ ಎಂದು ಲಂಡನ್ ಕೋರ್ಟ್ನಲ್ಲಿ ಆರೋಪಿಸಿದ್ದಾರೆ.
ಸೋಮವಾರ ಮಲ್ಯ ಪರ ವಾದ ಮಂಡಿಸಿದ ಮಲ್ಯ ಪರ ವಕೀಲರು, ‘ಭಾರತದ ಸುಪ್ರೀಂ ಕೋರ್ಟ್ ಬಗೆ ಗೌರವವಿದೆ. ಆದರೆ ನ್ಯಾಯದಾನ ವ್ಯವಸ್ಥೆಯಲ್ಲಿನ ನಿಷ್ಪಕ್ಷತೆ ಬಗ್ಗೆ ನಮಗೆ ಕೆಲವು ಸಂದೇಹಗಳಿವೆ’ ಎಂದು ಹೇಳಿದರು.
ನಿವೃತ್ತಿ ಅಂಚಿನಲ್ಲಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಕೊಡುವ ತೀರ್ಪುಗಳ ಬಗ್ಗೆ ಅವರು ಸಂದೇಹ ವ್ಯಕ್ತಪಡಿಸಿದರು.
