ಆ್ಯಡಂ ಪುರಿನ್'ಟನ್ ಗುಂಡಿಟ್ಟು ಕೊಲ್ಲುವ ಮುನ್ನ 'ನಮ್ಮ ದೇಶ ಬಿಟ್ಟು ತೊಲಗಿ' ಎಂದು ಅಬ್ಬರಿಸಿದ್ದಾನೆ.

ವಾಷಿಂಗ್ಟನ್(ಫೆ.24): ಅಮೆರಿಕದಲ್ಲಿ ಮತ್ತೆ ಜನಾಂಗೀಯ ದ್ವೇಷಕ್ಕೆ ಭಾರತೀಯನೊಬ್ಬ ಬಲಿಯಾಗಿದ್ದಾನೆ. ಹೈದರಾಬಾದ್ ಮೂಲದ ಸಾಫ್ಟವೇರ್ ಇಂಜಿನಿಯರ್ ಶ್ರೀನಿವಾಸ್ ಕುಚಿಬೋತ್ಲಾ(32) ಎಂಬಾತನನ್ನು 51 ವರ್ಷದ ಆ್ಯಡಂ ಪುರಿನ್'ಟನ್ ಎಂಬ ಅಮೆರಿಕಾದ ಪ್ರಜೆ ಗುಂಡಿಟ್ಟು ಕೊಂದಿದ್ದಾನೆ.

ಆ್ಯಡಂ ಪುರಿನ್'ಟನ್ ಗುಂಡಿಟ್ಟು ಕೊಲ್ಲುವ ಮುನ್ನ 'ನಮ್ಮ ದೇಶ ಬಿಟ್ಟು ತೊಲಗಿ' ಎಂದು ಅಬ್ಬರಿಸಿದ್ದಾನೆ. ಘಟನೆಯಲ್ಲಿ ಇನ್ನಿತರ ಇಬ್ಬರು ಗಾಯಗೊಂಡಿದ್ದಾರೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ನಂತರ ಜನಾಂಗೀಯ ದ್ವೇಷಕ್ಕೆ ಭಾರತೀಯನೊಬ್ಬ ಬಲಿಯಾಗಿರುವ ಮೊದಲ ಪ್ರಕರಣ ಇದಾಗಿದೆ.

ಹೈದರಾಬಾದ್ನ ಜವಹರ್ ಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ ಬಿ.ಟೆಕ್ ಪದವಿ ಪಡೆದಿರುವ ಶ್ರೀನಿವಾಸ್ ಕುಚಿಬೋತ್ಲಾ ನಂತರ ಅಮೆರಿಕಾದ ಟಾಕ್ಸಸ್ ವಿವಿಯಿಂದ ಸ್ವಾತಕೋತ್ತರ ಪದವಿ ಪಡೆದಿದ್ದರು. ನಂತರ ಯುಎಸ್'ನ ಒಲ್ತೆ'ದ ಪಟ್ಟಣದಲ್ಲಿನ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ನಿನ್ನೆ ಸ್ನೇಹಿತರೊಂದಿಗೆ ಕ್ಯಾನ್ವಾಸ್ ಬಾರ್'ನ ನೈಟ್ ಕ್ಲಬ್'ಗೆ ಹೋಗಿದ್ದಾಗ ಹತ್ಯೆ ಸಂಭವಿಸಿದೆ.

ಜನಾಂಗೀಯ ಹತ್ಯೆಗೆ ಭಾರತದ ವಿದೇಶಾಂಗ ಸಚಿವೆ ಸುಷ್ಮಸ್ವರಾಜ್, ಅಮೆರಿಕಾದ ಹಿಂದು ಸಂಘಟನೆ ಸೇರಿದಂತೆ ಹಲವರು ತೀವ್ರವಾಗಿ ಖಂಡಿಸಿದ್ದಾರೆ.