Asianet Suvarna News Asianet Suvarna News

ಅಧಿಕ ರಕ್ತದೊತ್ತಡ ಅಳೆಯಲು ಹೊಸ ಮಾನದಂಡ?

130/80 ಕ್ಕಿಂತ ಅಧಿಕ ಪ್ರಮಾಣದ ರಕ್ತದೊತ್ತಡವನ್ನು ಸಂಭಾವ್ಯ ರೋಗ ಹಾಗೂ ಬೀಪಿಯ ಸಂರ್ಕೀಣತೆಯ ಎಚ್ಚರಿಕೆಯ ಸಂದೇಶವಾಗಿ ಪರಿಗಣಿಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ. 

Indian Doctors revise high blood pressure norm to 130/80 or less

ನವದೆಹಲಿ (ಜು. 10): ಅಧಿಕ ರಕ್ತದೊತ್ತಡವನ್ನು ಅಳೆಯುವ ಮಾನ ದಂಡವೇ ಬದಲಾಗಬೇಕು ಎಂದು ಹಿರಿಯ ವೈದ್ಯರೊಬ್ಬರು ಆಗ್ರಹಪಡಿಸಿದ್ದಾರೆ.

140/90 ರ ಒಳಗೆ ರಕ್ತದೊತ್ತಡ ಇದ್ದರೆ ಅದು ‘ಸಾಮಾನ್ಯ’ ಎಂಬ ಅಭಿಪ್ರಾಯ ಸದ್ಯ ಇದೆ. ಇದನ್ನು 130/80  ಕ್ಕೆ ಅಥವಾ ಈಗಿರುವ ಮಟ್ಟಕ್ಕಿಂತ ಕೆಳಕ್ಕೆ ಇಳಿಸಬೇಕು ಎಂದು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯ ಹಿರಿಯ ವೈದ್ಯರೂ ಆಗಿರುವ ಅಮೆರಿಕನ್ ಸೊಸೈಟಿ ಆಫ್ ಹೈಪರ್‌ಟೆನ್ಷನ್‌ನ ಸಂಸ್ಥಾಪಕ ಸದಸ್ಯ ಸಿ. ವೆಂಕಟ ಎಸ್. ರಾಮ್ ಅವರು ಪ್ರಬಲವಾಗಿ ವಾದ ಮಂಡಿಸಿದ್ದಾರೆ.

130/80 ಕ್ಕಿಂತ ಅಧಿಕ ಪ್ರಮಾಣದ ರಕ್ತದೊತ್ತಡವನ್ನು ಸಂಭಾವ್ಯ ರೋಗ ಹಾಗೂ ಬೀಪಿಯ ಸಂರ್ಕೀಣತೆಯ ಎಚ್ಚರಿಕೆಯ ಸಂದೇಶವಾಗಿ ಪರಿಗಣಿಸಬೇಕು ಎಂದು ಅವರು ಸಲಹೆ ಮಾಡಿದ್ದಾರೆ. ಒಂದು ವೇಳೆ, ಈ ಮಾನದಂಡವೇನಾದರೂ ಜಾರಿಗೆ ಬಂದರೆ ತಮಗೆ ಬೀಪಿ ಇಲ್ಲ ಎಂದು ಹೇಳಿಕೊಳ್ಳುವ ಲಕ್ಷಾಂತರ ಮಂದಿ ತನ್ನಿಂತಾನೇ ಅಧಿಕ ರಕ್ತದೊತ್ತಡ ಸಮಸ್ಯೆ ಉಳ್ಳವರಾಗಿ ಬದಲಾಗಲಿದ್ದಾರೆ. 

Follow Us:
Download App:
  • android
  • ios