ಲಂಡನ್: ಭಾರತದ ಬ್ಯಾಂಕ್‌ಗಳಿಗೆ 9000 ಕೋಟಿ ರು. ವಂಚಿಸಿ ಪರಾರಿಯಾಗಿರುವ ವಿಜಯ್ ಮಲ್ಯರನ್ನು ಬ್ರಿಟನ್‌ನಿಂದ ಗಡಿಪಾರು ಮಾಡುವ ಕುರಿತು ಸ್ಥಳೀಯ ಕೋರ್ಟ್ ಸುಳಿವು ನೀಡಿದೆ. 

ಮಲ್ಯ ಆಸ್ತಿ ಮುಟ್ಟುಗೋಲಿಗೆ ಮಂಗಳವಾರ ಅನುಮತಿ ನೀಡುವ ವೇಳೆ ಮಲ್ಯ‘ನ್ಯಾಯಾಂಗ ವ್ಯವಸ್ಥೆಯಿಂದ ಪರಾರಿಯಾದವರು’ ಎಂದು ಪರಿಗಣಿಸಬಹುದಾಗಿ ನ್ಯಾ.ಆ್ಯಂಡ್ರ್ಯೂ ಹೆನ್ ಶಾ ಹೇಳಿದ್ದಾರೆ. 

ಮಲ್ಯ ತಾವು ಅನಿವಾಸಿ ಭಾರತೀಯ, 1992 ರಿಂದ ಇಂಗ್ಲೆಂಡ್ ವಾಸಿ ಎಂದು ಪ್ರತಿಪಾದಿಸಿದ್ದರೂ, ಭಾರತದೊಂದಿಗಿನ ಅವರ ರಾಜಕೀಯ, ಉದ್ಯಮ ನಂಟನ್ನು ಕೋರ್ಟ್ ಗಣನೆಗೆ ತೆಗೆದುಕೊಂಡಿದೆ