ಯಾವುದೇ ಏಟಿಗೆ ಅದಕ್ಕಿಂತ ಬಲವಾದ ಪ್ರತಿಯೇಟು ನೀಡಲು ಭಾರತ ನಿರ್ಧರಿಸಿರುವುದು ಈ ಘಟನೆಗಳೇ ಸಾಕ್ಷಿಯಾಗಿವೆ.

ನವದೆಹಲಿ(ನ. 05): ವಾರದ ಹಿಂದೆ ಪಾಕ್ ಉಗ್ರರು ಭಾರತಕ್ಕೆ ನುಗ್ಗಿ ಮಂದೀಪ್ ಸಿಂಗ್ ಎಂಬ ಸೈನಿಕರ ತಲೆ ಕತ್ತರಿಸಿದ ಘಟನೆ ದೊಡ್ಡ ಸುದ್ದಿ ಮಾಡಿತ್ತು. ಆದರೆ, ಆ ಘಟನೆ ನಡೆದ ಮರುದಿನ ಭಾರತೀಯ ಸೇನೆ ಪಾಕ್ ಗಡಿಭಾಗದಲ್ಲಿ ತೀಕ್ಷ್ಣ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿತು. ಅಕ್ಟೋಬರ್ 29ರಂದು ನಡೆದ ಆ ದಾಳಿಯಲ್ಲಿ 40ಕ್ಕೂ ಹೆಚ್ಚು ಪಾಕ್ ಸೈನಿಕರು ಹತ್ಯೆಯಾಗಿದ್ದರು ಎಂದು ನ್ಯೂಸ್18 ವಾಹಿನಿ ವರದಿ ಮಾಡಿದೆ.

ಅ.28ರಂದು ಮಂದೀಪ್ ಸಿಂಗ್'ರ ತಲೆ ಕತ್ತರಿಸಿದ್ದ ಉಗ್ರರಿಗೆ ಸ್ವತಃ ಪಾಕ್ ಸೇನೆಯೇ ಬೆಂಗಾವಲಾಗಿ ನಿಂತಿತ್ತು. ಕಳೆದ ತಿಂಗಳು ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್'ಗೆ ಪ್ರತಿಯಾಗಿ ಪಾಕ್ ಸೇನೆಯು ಈ ರೀತಿಯಾಗಿ ಉಗ್ರರನ್ನು ಛೂ ಬಿಟ್ಟಿತ್ತೆನ್ನಲಾಗಿದೆ. ಆದರೆ, ಯಾವುದೇ ಏಟಿಗೆ ಅದಕ್ಕಿಂತ ಬಲವಾದ ಪ್ರತಿಯೇಟು ನೀಡಲು ಭಾರತ ನಿರ್ಧರಿಸಿರುವುದು ಈ ಘಟನೆಗಳೇ ಸಾಕ್ಷಿಯಾಗಿವೆ.