ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿ ಹರಡುತ್ತಿದೆ. ಭಾರತೀಯ ಸೇನೆ ಈ ವಿಡಿಯೋವನ್ನು ದೃಢಪಡಿಸಿಲ್ಲ. ಆದರೆ, ಕಳೆದ ತಿಂಗಳು ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಪಾಕಿಸ್ತಾನೀಯರು ಭಾರತದ ಇಬ್ಬರು ಯೋಧರ ಶಿರಚ್ಛೇದನ ಮಾಡಿದ ಘಟನೆಗೆ ಮುನ್ನ ಈ ದಾಳಿ ನಡೆದಿರುಬಹುದೆನ್ನಲಾಗಿದೆ. ಇದು ನಿಜವೇ ಆಗಿದ್ದರೆ, ಬಂಕರ್ ನಾಶಕ್ಕೆ ಪ್ರತೀಕಾರವಾಗಿ ಪಾಕಿಸ್ತಾನೀಯರು ಭಾರತೀಯ ಯೋಧರ ತಲೆಕಡಿದಿರಬಹುದು.

ನವದೆಹಲಿ(ಮೇ 08): ಪಾಕಿಸ್ತಾನವು ಪದೇಪದೇ ಕಾಲು ಕೆರೆದುಕೊಂಡು ಕದನವಿರಾಮ ಉಲ್ಲಂಘಿಸುತ್ತಿದ್ದರೂ ಭಾರತ ಮೌನವಹಿಸಿಕೊಂಡಿರುತ್ತದೆ ಎಂಬ ಆರೋಪ ಸಾಕಷ್ಟು ಕೇಳಿಬರುತ್ತದೆ. ಆದರೆ, ಭಾರತೀಯ ಸೇನೆ ಸುಮ್ಮನೆ ಕೈಚೆಲ್ಲಿ ಕೂರೋದಿಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಕಾಶ್ಮೀರದ ಗಡಿ ಭಾಗದಲ್ಲಿ ಪಾಕಿಸ್ತಾನದ ಬಂಕರ್'ವೊಂದನ್ನು ನಾಶಪಡಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ಭಾರತೀಯ ಸೇನೆಯ ಆ್ಯಂಟಿ-ಟ್ಯಾಂಕ್ ಕ್ಷಿಪಣಿಗಳು ಪಾಕ್ ಬಂಕರ್'ನ್ನು ಉಡೀಸ್ ಮಾಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿ ಹರಡುತ್ತಿದೆ. ಭಾರತೀಯ ಸೇನೆ ಈ ವಿಡಿಯೋವನ್ನು ದೃಢಪಡಿಸಿಲ್ಲ. ಆದರೆ, ಕಳೆದ ತಿಂಗಳು ಈ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದೆ. ಪಾಕಿಸ್ತಾನೀಯರು ಭಾರತದ ಇಬ್ಬರು ಯೋಧರ ಶಿರಚ್ಛೇದನ ಮಾಡಿದ ಘಟನೆಗೆ ಮುನ್ನ ಈ ದಾಳಿ ನಡೆದಿರುಬಹುದೆನ್ನಲಾಗಿದೆ. ಇದು ನಿಜವೇ ಆಗಿದ್ದರೆ, ಬಂಕರ್ ನಾಶಕ್ಕೆ ಪ್ರತೀಕಾರವಾಗಿ ಪಾಕಿಸ್ತಾನೀಯರು ಭಾರತೀಯ ಯೋಧರ ತಲೆಕಡಿದಿರಬಹುದು.

ಏನಿದು ಬಂಕರ್?
ಸೇನೆಯ ಬಂಕರ್'ನಲ್ಲಿ ಇಂಧನ ಮೊದಲಾದವನ್ನು ಸಂಗ್ರಹಿಸಿಡಲಾಗಿರುತ್ತದೆ. ಯೋಧರಿಗೆ ಬೇಕಾದ ಬಹುಮುಖ್ಯ ವಸ್ತುಗಳು, ಪರಿಕರಗಳು ಈ ಬಂಕರ್'ನಲ್ಲಿರುತ್ತವೆ. ಇವು ಒಂದು ರೀತಿಯಲ್ಲಿ ಸೇನಾ ಉಗ್ರಾಣದಂತೆ ಕಾರ್ಯನಿರ್ವಹಿಸುತ್ತದೆ. ಬಾಂಬ್ ಮೊದಲಾದವುಗಳಿಂದ ರಕ್ಷಿಸಲು ಈ ಬಂಕರ್'ಗಳನ್ನ ಅಂಡರ್'ಗ್ರೌಂಡ್'ನಲ್ಲಿ ನಿರ್ಮಿಸಲಾಗಿರುತ್ತದೆ.