ನವದೆಹಲಿ[ಸೆ.28]: ಭಾರತೀಯ ಸೇನಾಪಡೆಯ ತರಬೇತಿ ತಂಡದ ಹೆಲಿಕಾಪ್ಟರ್‌ವೊಂದು ಪತನವಾಗಿ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ ದುರಂತ ಘಟನೆ ಪೂರ್ವ ಭೂತಾನ್‌ನಲ್ಲಿ ನಡೆದಿದೆ.

ಪೈಲಟ್ ಆಗಲು ಬಿಡದ ಬಡತನ: ತನ್ನದೇ ’ಹೆಲಿಕಾಪ್ಟರ್’ ನಿರ್ಮಿಸಿದ ರೈತನ ಮಗ!

ಈ ಘಟನೆಯಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಭಾರತೀಯ ಸೇನೆಯ ಕರ್ನಲ್‌ ರಜನೀಶ್‌ ಪಾರ್ಮರ್‌ ಅವರು ಸಾವನ್ನಪ್ಪಿದ್ದು, ಮತ್ತೋರ್ವ ಭಾರತೀಯ ಸೇನೆಯಿಂದ ತರಬೇತು ಪಡೆಯುತ್ತಿದ್ದ ಭೂತಾನ್‌ ಸೇನೆಯ ಪೈಲಟ್‌ ಸಹ ಸಾವಿಗೀಡಾಗಿದ್ದಾರೆ.

ವಾಯುಪಡೆ ವಿಮಾನಕ್ಕೆ ಡಿಕ್ಕಿ ಹೊಡೆದ ಹಕ್ಕಿ: ಬಾಂಬ್ ಹೊರ ಎಸೆದು ಭೂಸ್ಪರ್ಶಿಸಿದ ಪೈಲೆಟ್!

ಶುಕ್ರವಾರ ಮಧ್ಯಾಹ್ನ ಅರುಣಾಚಲ ಪ್ರದೇಶದ ಖಿರ್ಮು ಎಂಬಲ್ಲಿಂದ ಭೂತಾನ್‌ನ ಯಾಂಗ್‌ಫುಲ್ಲಾಗೆ ಆಗಮಿಸುತ್ತಿತ್ತು. ಈ ವೇಳೆ ಮಧ್ಯಾಹ್ನ 1 ಗಂಟೆ ವೇಳೆಗೆ ಚೇತಕ್‌ ಹೆಲಿಕಾಪ್ಟರ್‌ ರೇಡಿಯೋ ಹಾಗೂ ದೃಷ್ಟಿಗೋಚರ ಸಂಪರ್ಕದಿಂದ ಕಣ್ಮರೆಯಾಗಿ, ದುರಂತಕ್ಕೆ ತುತ್ತಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.