ಸೇನೆಯ ಕೆಲವೊಂದು ನಿರ್ಧರಿತ ವರದಿಗಳ ಆಧಾರದ ಮೇಲೆ ನಮ್ಮ ಕಮಾಂಡೊ ಪಡೆ ಕೊಂದು ಹಾಕಿದ ಉಗ್ರರ ಮಾಹಿತಿ ಲಭ್ಯವಾಗಿದೆ.

ಬಾರಮುಲ್ಲ/ನವದೆಹಲಿ(ಅ.9): ಸುಮಾರು 15 ದಿನಗಳ ಹಿಂದಷ್ಟೇ ನಮ್ಮ ಧೀರ ಯೋಧರು ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಆಕ್ರಮಿತ ಕಾಶ್ಮಿರದ ಉಗ್ರರ ಶಿಬಿರಗಳನ್ನು ನಾಶ ಮಾಡಿ ಭಯೋತ್ಪಾದಕರನ್ನು ಸದೆಬಡಿದಿತ್ತು. ಈ ಸಾಧನೆ ಮಾಡಿದ್ದಕ್ಕೆ ಭಾರತೀಯ ಸೇನೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿತ್ತು.

ಆದರೆ ಶಿಬಿರಗಳಲ್ಲಿ ಹತ್ಯೆಯಾದ ಉಗ್ರರು ಮಾತ್ರ ಯಾವ ಸಂಘಟನೆಗೆ ಸೇರಿದ್ದವರೆಂದು ಪಾಕ್ ಸರಿಯಾಗಿ ಸ್ಪಷ್ಟನೆ ನೀಡಲಿಲ್ಲ. ಆದರೆ ಸೇನೆಯ ಕೆಲವೊಂದು ನಿರ್ಧರಿತ ವರದಿಗಳ ಆಧಾರದ ಮೇಲೆ ನಮ್ಮ ಕಮಾಂಡೊ ಪಡೆ ಕೊಂದು ಹಾಕಿದ ಉಗ್ರರ ಮಾಹಿತಿ ಲಭ್ಯವಾಗಿದ್ದು,ಅವರು ಪ್ರಮುಖ ಉಗ್ರ ಸಂಘಟನೆಯಾದ 'ಲಷ್ಕರ್ ಇ ತೊಯ್ಬಾ'ದ ಉಗ್ರರು.

ನಮ್ಮ ಸೇನೆಯ ದಾಳಿಯಿಂದ ಲಷ್ಕರ್ ಸಂಘಟನೆಗೆ ಅಪಾರವಾದ ನಷ್ಟವಾಗಿದ್ದು, ಸುಮಾರು 20 ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಎಂದು ಸೇನೆಯ ನಿರ್ಧರಿತ ವರದಿಗಳು ತಿಳಿಸಿವೆ.