Asianet Suvarna News Asianet Suvarna News

ಅಮೆರಿಕಾ ಮಹಾಬಾಂಬ್’ಗೆ ಭಾರತೀಯ ಬಲಿ?

ಇದರಲ್ಲಿ ಹಲವು ಐಸಿಸ್ ಉಗ್ರರು ಹತರಾಗಿದ್ದು, ಈ ಪೈಕಿ ಕಾಸರಗೋಡುವಿನ 21 ವರ್ಷದ ಮುರ್ಷೀದ್ ಎಂಬ ಯುವಕ ಕೂಡ ಸೇರಿದ್ದಾನೆ ಎಂದು ವರದಿಯಾಗಿದೆ. ಈ ಹಿಂದೆ ಕೇರಳದಿಂದ ನಾಪತ್ತೆಯಾಗಿದ್ದ 21 ಮಂದಿ ಯುವಕರ ಪೈಕಿ ಮೃತ ಮುರ್ಷೀದ್ ಸಹ ಇದ್ದ ಅಂತ ಹೇಳಲಾಗುತ್ತಿದೆ.

Indian Among the Died People in US Bombing in Afghanistan
  • Facebook
  • Twitter
  • Whatsapp

ಅಫ್ಘಾನಿಸ್ತಾನದ ಐಸಿಸ್‌ ಉಗ್ರರ ಅಡಗುತಾಣಗಳ ಮೇಲೆ ಅಮೆರಿಕ ನಡೆಸಿರುವ ಅತಿ ದೊಡ್ಡ ಬಾಂಬ್‌ ದಾಳಿಯಲ್ಲಿ ಕೇರಳದ ಕಾಸರಗೋಡುವಿನ ಯುವಕನೋರ್ವ ಸಾವನ್ನಪ್ಪಿರುವ ಸುದ್ದಿ ವರದಿಯಾಗಿದೆ.

ಅಫ್ಘಾನ್‌’ನಲ್ಲಿ ಐಸಿಸ್ ಉಗ್ರರ ಪ್ರಮುಖ ಅಡಗುತಾಣವಾಗಿರುವ ಅಚಿನ್ ಜಿಲ್ಲೆಯ ನಂಗರ್‌ಹಾರ್ ಪ್ರಾಂತ್ಯದಲ್ಲಿ ಗುರುವಾರ ಅಮೆರಿಕಾವು ಬಾಂಬ್’ಗಳ ಮಹಾತಾಯಿ ಎನ್ನಲಾಗುವ GBU 43 ಬಾಂಬ್ ದಾಳಿ ನಡೆಸಿದೆ.

ಇದರಲ್ಲಿ ಹಲವು ಐಸಿಸ್ ಉಗ್ರರು ಹತರಾಗಿದ್ದು, ಈ ಪೈಕಿ ಕಾಸರಗೋಡುವಿನ 21 ವರ್ಷದ ಮುರ್ಷೀದ್ ಎಂಬ ಯುವಕ ಕೂಡ ಸೇರಿದ್ದಾನೆ ಎಂದು ವರದಿಯಾಗಿದೆ. ಈ ಹಿಂದೆ ಕೇರಳದಿಂದ ನಾಪತ್ತೆಯಾಗಿದ್ದ 21 ಮಂದಿ ಯುವಕರ ಪೈಕಿ ಮೃತ ಮುರ್ಷೀದ್ ಸಹ ಇದ್ದ ಅಂತ ಹೇಳಲಾಗುತ್ತಿದೆ.

ಇವರೆಲ್ಲರೂ ಐಸಿಸ್’ಸ್‌ ಉಗ್ರ ಸಂಘಟನೆ ಸೇರಿಕೊಂಡಿದ್ದರು ಎಂದು ಗೊತ್ತಾಗಿತ್ತು. ಇದೀಗ ಅಮೆರಿಕಾ ನಡೆಸಿರುವ ಬಾಂಬ್‌ ದಾಳಿಯಲ್ಲಿ ಮುರ್ಷೀದ್ ಹತನಾಗಿದ್ದಾನೆ. ಈತನ ಸಾವಿನ ಬಗ್ಗೆ ಕೇರಳದ ಕಾಸರಗೋಡುವಿನಲ್ಲಿರುವ ಆತನ ಕುಟುಂಬಸ್ಥತರಿಗೆ ಸಂದೇಶ ಬಂದಿದೆ.

ಹಫೀಜುದ್ದೀನ್ ಥೆಕೆ ಕೊಲೆತ್ ಎಂಬುವವರಿಗೆ ಟೆಲಿಗ್ರಾಮ್ ಸಂದೇಶ ಬಂದಿದ್ದು, ಮುರ್ಷೀದ್‌ನನ್ನು ಅಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿಸುವುದಾಗಿ ತಿಳಲಾಗಿದೆ ಎಂದು ತಿಳಿದುಬಂದಿದೆ.

Follow Us:
Download App:
  • android
  • ios