ಈ ಕ್ರೀಡಾಂಗಣಗಳು ಆಧುನಿಕ ಜೀವನ ಶೈಲಿಗೆ ಅಗತ್ಯವಿರುವ ಶಾಪಿಂಗ್ ಸೆಂಟರ್, ಮನರಂಜನಾ ಕೇಂದ್ರಗಳನ್ನೂ ಒಳಗೊಳ್ಳಲಿವೆ ಎಂದು ತಿಳಿಸಿದ್ದಾರೆ.

ನವದೆಹಲಿ(ಫೆ.02): ಅಮೆರಿಕದಲ್ಲಿ ಕ್ರಿಕೆಟ್ ಆಟವನ್ನು ಜನಪ್ರಿಯಗೊಳಿಸಲು ಇಂಡೋ-ಅಮೆರಿಕನ್ ನಿವಾಸಿ ಜಿಗ್ನೇಶ್ ಪಾಂಡ್ಯ ಸರಿಸುಮಾರು 2.4 ಬಿಲಿಯನ್ ಡಾಲರ್ ವೆಚ್ಚದಲ್ಲಿ ಅಮೆರಿಕಾದ್ಯಂತ ಎಂಟು ಕ್ರಿಕೆಟ್ ಕ್ರೀಡಾಂಗಣಗಳನ್ನು ನಿರ್ಮಿಸಲು ಮುಂದಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯುಎಸ್‌'ನಲ್ಲಿರುವ ಗುಜರಾತ್ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಪಾಂಡ್ಯ, ನ್ಯೂಯಾರ್ಕ್, ನ್ಯೂಜೆರ್ಸಿ, ವಾಷಿಂಗ್ಟನ್ ಡಿಸಿ, ಜಾರ್ಜಿಯಾ, ಫ್ಲೋರಿಡಾ, ಟೆಕ್ಸಾಸ್, ಇಲಿನಾಯಿಸ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಸರಿಸುಮಾರು 26 ಸಹಸ್ರ ಪ್ರೇಕ್ಷಕ ಸಾಮರ್ಥ್ಯದ ಕ್ರೀಡಾಂಗಣಗಳನ್ನು ನಿರ್ಮಿಸಲು ರೂಪುರೇಷೆ ಸಿದ್ಧಪಡಿಸಿದ್ದಾರೆ. ಈ ಕ್ರೀಡಾಂಗಣಗಳು ಆಧುನಿಕ ಜೀವನ ಶೈಲಿಗೆ ಅಗತ್ಯವಿರುವ ಶಾಪಿಂಗ್ ಸೆಂಟರ್, ಮನರಂಜನಾ ಕೇಂದ್ರಗಳನ್ನೂ ಒಳಗೊಳ್ಳಲಿವೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಅಮೆರಿಕದಲ್ಲಿ 17,800 ಹೊಸ ಉದ್ಯೋಗಾವಕಾಶಕ್ಕೂ ಅವರು ಮಾರ್ಗ ರೂಪಿಸಿದ್ದಾರೆಂದು ಪಿಟಿಐ ವರದಿ ಮಾಡಿದೆ.