ಅಜಾತಶತ್ರು ವಿರುದ್ಧ ಗುಡುಗಿ ಮೆತ್ತಗಾಗಿದ್ದ ಸೋನಿಯಾ! ವಾಜಪೇಯಿ ಅವರನ್ನು ಗದ್ದಾರ್ ಎಂದು ಜರೆದಿದ್ದ ಸೋನಿಯಾ! ಸೋನಿಯಾ ಹೇಳಿಕೆ ಒಕ್ಕೊರಲಿನಿಂದ ಖಂಡಿಸಿದ್ದ ದೇಶ! ಸೋನಿಯಾ ಕ್ಷಮೆಯಾಚನೆಗೆ ಬಿಗಿಪಟ್ಟು ಹಿಡಿದಿದ್ದ ದೇಶ! 1999 ರಲ್ಲಿ ವಾಜಪೇಯಿ ವಿರುದ್ದ ಸೋನಿಯಾ ಆಡಿದ್ದ ಮಾತು
ನವದೆಹಲಿ(ಆ.17): ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ಗೌರವಿಸಿದ ಹೃದಯಗಳಿಲ್ಲ. ಇದೇ ಕಾರಣಕ್ಕೆ ಅವರನ್ನು ಅಜಾತಶತ್ರು ಎಂದು ಕರೆಯಲಾಗುತ್ತಿತ್ತು.
ಎಷ್ಟೇ ಸೈದ್ದಾಂತಿಕ ಭಿನ್ನಾಭಿಪ್ರಾಯ ಇದ್ದರೂ ಪಕ್ಷಾತೀತವಾಗಿ ವಾಜಪೇಯಿ ಅವರನ್ನು ಎಲ್ಲರೂ ಗೌರವಿಸುತ್ತಿದ್ದರು. ಆದರೆ ಕಾಂಗ್ರೆಸ್ ನ ನಿಕಟಪೂರ್ವ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಮಾತ್ರ ಅಟಲ್ ಬಿಹಾರಿ ವಾಜಪೇಯಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ದೇಶದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದರು.
1999 ರಲ್ಲಿ ಉಜ್ಜಯಿನಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಸೋನಿಯಾ ಗಾಂಧಿ, ಅಂದಿನ ಪ್ರಧಾನಿ ವಾಜಪೇಯಿ ಅವರನ್ನು ಗದ್ದಾರ್ (ದೇಶದ್ರೋಹಿ) ಎಂದು ಜರೆದಿದ್ದರು.
ಸೋನಿಯಾ ಗಾಂಧಿ ಹೇಳಿಕೆಗೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದ ಬಿಜೆಪಿ, ಕೂಡಲೇ ಸೋನಿಯಾ ಗಾಂಧಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿತ್ದ್ದತು.
