ಒಪ್ಪಂದದಲ್ಲಿ ರಷ್ಯಾ ದೇಶದ ಪ್ರತಿನಿಧಿ ಯೂರಿ ಯುಶಕೋವ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದು, ತದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತ್ಯೇಕವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟೀನ್ ಅವರನ್ನು ಭೇಟಿಯಾಗಲಿದ್ದಾರೆ.
ನವದೆಹಲಿ(ಅ.13): ಕೇಂದ್ರ ಸರ್ಕಾರವು ಗೋವಾದಲ್ಲಿ ಅ.15 ರಂದು ನಡೆಯುವ ಬ್ರಿಕ್ಸ್ ದೇಶಗಳ ಸಮಾವೇಶದಲ್ಲಿ ರಷ್ಯಾದ ಜೊತೆ ಎಸ್-400 ಯುದ್ಧ ವಿಮಾನಗಳ ಖರೀದಿಗೆ 30 ಸಾವಿರ ಕೋಟಿ ರೂ. ಮೊತ್ತದ ಒಪ್ಪಂದಕ್ಕೆ ಸಹಿ ಹಾಗಲಿದೆ.
ಎಸ್-400 ಮೇಲ್ಮೈಯಿಂದ ಚಿಮ್ಮುವ ಕ್ಷಿಪಣಿಗಳಾಗಿದ್ದು, ಪ್ರಮುಖ ಸರ್ಕಾರಿ ಜಾಗಗಳಲ್ಲಿ ಅಣುಶಕ್ತಿ ಘಟಕಗಳನ್ನು ಒಳಗೊಂಡ ಕೇಂದ್ರಗಳಲ್ಲಿ 5 ಯುದ್ಧ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಗೋವಾದಲ್ಲಿ ಅ.15 ರಂದು ನಡೆಯುವ ಬ್ರಿಕ್ಸ್ ಸಮಾವೇಶದಲ್ಲಿ ಚೀನಾ,ರಷ್ಯಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಪಾಲ್ಗೊಳ್ಳಲಿವೆ.
ಒಪ್ಪಂದದಲ್ಲಿ ರಷ್ಯಾ ದೇಶದ ಪ್ರತಿನಿಧಿ ಯೂರಿ ಯುಶಕೋವ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದು, ತದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತ್ಯೇಕವಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟೀನ್ ಅವರನ್ನು ಭೇಟಿಯಾಗಲಿದ್ದಾರೆ. ಎಸ್-400 ಯುದ್ಧ ವಿಮಾನಗಳ ಖರೀದಿಯನ್ನು ಡಿಸೆಂಬರ್ ವೇಳೆಗೆ ರಕ್ಷಣಾ ಇಲಾಖೆ ಅಂತ್ಯಗೊಳಿಸಿದೆ. ಈ ಯುದ್ಧ ವಿಮಾನಗಳ ವೇಗದ ಪರಿಮಿತಿ 400 ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ.
