ನವದೆಹಲಿ[ಅ.07]: ಮಹಾಚುನಾವಣೆ ಸಂದರ್ಭದಲ್ಲಿ ವಿವಾದದ ಹುಡಿ ಎಬ್ಬಿಸಿದ್ದ ರಫೇಲ್‌ ಯುದ್ಧ ವಿಮಾನ ಭಾರತಕ್ಕೆ ವಿಜಯದಶಮಿ ದಿನವಾದ ಮಂಗಳವಾರ (ಅಕ್ಟೋಬರ್‌ 8) ಹಸ್ತಾಂತರಗೊಳ್ಳಲಿದೆ. ಅಂದು ಮೊದಲ ರಫೇಲ್‌ ವಿಮಾನವನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಫ್ರಾನ್ಸ್‌ಗೆ ತೆರಳಿ ಸ್ವೀಕರಿಸಲಿದ್ದಾರೆ.

ಅಂದೇ ಸಿಂಗ್‌ ಅವರು ಭಾರತಕ್ಕೆ ಹಸ್ತಾಂತರಗೊಳ್ಳುವ ಮೊದಲ ರಫೇಲ್‌ ವಿಮಾನದಲ್ಲಿ ಹಾರಾಟ ನಡೆಸಲಿದ್ದಾರೆ. ಫ್ರೆಂಚ್‌ ಪೈಲಟ್‌ ಒಬ್ಬರು ರಾಜನಾಥ್‌ ಅವರನ್ನು ಹಿಂದಿನ ಸೀಟಿನಲ್ಲಿ ಕೂಡಿಸಿ ರಫೇಲ್‌ ಹಾರಿಸಲಿದ್ದಾರೆ. ಭಾರತಕ್ಕೆ ರಷ್ಯಾ 36 ರಫೇಲ್‌ಗಳನ್ನು ಹಸ್ತಾಂತರಿಸಬೇಕಿದ್ದು, ಮುಂದಿನ ದಿನಗಳಲ್ಲಿ ಬಾಕಿ 35 ವಿಮಾನಗಳು ರವಾನೆಯಾಗಲಿವೆ.

ವಾಯುಸೇನೆ ಮುಖ್ಯಸ್ಥರಾಗಿ RKS ಬದೌರಿಯಾ ಅಧಿಕಾರ ಸ್ವೀಕಾರ!

ಅಕ್ಟೋಬರ್‌ 8ರಂದು ರಾಜನಾಥ್‌ ಫ್ರಾನ್ಸ್‌ ತಲುಪಲಿದ್ದು, ಆ ದಿನ ದಸರೆಯ ದಿನ ಹಾಗೂ ಭಾರತೀಯ ವಾಯುಪಡೆ ದಿನವೂ ಆಗಿದೆ.

ಫ್ರಾನ್ಸ್‌ನಲ್ಲೇ ರಾಜನಾಥ್‌ ಆಯುಧಪೂಜೆ

ದಸರೆಯು ಶಸ್ತ್ರಪೂಜೆಗೆ ಹೆಸರಾಗಿದ್ದು, ಭಾರತದ ರಕ್ಷಣಾ ಮಂತ್ರಿ ರಾಜನಾಥ ಸಿಂಗ್‌ ಅವರು ಈ ಸಲ ಫ್ರಾನ್ಸ್‌ನಲ್ಲೇ ವಿಜಯದಶಮಿ ದಿನವಾದ ಮಂಗಳವಾರ ಆಯುಧಪೂಜೆ ನೆರವೇರಿಸಲಿದ್ದಾರೆ.

ಫ್ರಾನ್ಸ್ ನಿಂದ ಭಾರತ 36 ರಫೇಲ್‌ ವಿಮಾನ ಖರೀದಿ?

ಅಂದು ರಫೇಲ್‌ ಯುದ್ಧವಿಮಾನವನ್ನು ಸ್ವೀಕರಿಸಲಿರುವ ಅವರು ಆಯುಧಪೂಜೆಯನ್ನೂ ಮಾಡಲಿದ್ದಾರೆ. ಈ ಹಿಂದೆ ಗೃಹ ಸಚಿವರಾಗಿದ್ದ ವೇಳೆಯೂ ಅವರು ಆಯುಧಪೂಜೆ ಮಾಡುತ್ತಿದ್ದರು. ಈ ಸಲ ಫ್ರಾನ್ಸ್‌ನಲ್ಲಿದ್ದರೂ ಅವರು ಆ ಸಂಪ್ರದಾಯ ಮುಂದುವರಿಸಲಿದ್ದಾರೆ.