ಮುಂದಿನ ಒಂದು ದಶಕದಲ್ಲಿ ಭಾರತವು ಜಗತ್ತಿನ ಅತೀ ಪ್ರಬಲ ಆರ್ಥಿಕ ದೇಶವಾಗಿ ಹೊರಹೊಮ್ಮಲಿದೆ ಎಂದು ಬ್ಯಾಂಕ್ ಆಫ್ ಅಮೆರಿಕಾದ ಮೆರ್ರಿಲ್ ಲಿಂಚ್ ವರದಿಯು ಹೇಳಿದೆ.
ಮುಂಬೈ: ಮುಂದಿನ ಒಂದು ದಶಕದಲ್ಲಿ ಭಾರತವು ಜಗತ್ತಿನ ಅತೀ ಪ್ರಬಲ ಆರ್ಥಿಕ ದೇಶವಾಗಿ ಹೊರಹೊಮ್ಮಲಿದೆ ಎಂದು ಬ್ಯಾಂಕ್ ಆಫ್ ಅಮೆರಿಕಾದ ಮೆರ್ರಿಲ್ ಲಿಂಚ್ ವರದಿಯು ಹೇಳಿದೆ.
ಮುಂದಿನ ಒಂದು ದಶಕದಲ್ಲಿ ಭಾರತವು ಜಪಾನ್’ಅನ್ನು ಹಿಂದಿಕ್ಕಲಿದ್ದು, ಜಗತ್ತಿನ ಮೂರನೇ ಅತೀದೊಡ್ಡ ಆರ್ಥಿಕತೆಯಾಗಿ ಬೆಳೆಯಲಿದೆ ಎಂದು ವರದಿಯು ಹೇಳಿದೆ.
ಬ್ರಿಕ್ಸ್ ದೇಶಗಳ ಪೈಕಿ ಭಾರತವು ಈಗಾಗಲೇ ರಷ್ಯಾ ಹಾಗೂ ಬ್ರೆಝಿಲ್’ಗಳನ್ನು ಹಿಂದಿಕ್ಕಿದೆ.
ಚೀನಾ ಬ್ರಿಕ್ಸ್ ದೇಶಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಭಾರತವು 2019ರೊಳಗೆ ಜರ್ಮನಿ ಹಾಗೂ ಫ್ರಾನ್ಸ್’ ದೇಶಗಳನ್ನು ಹಿಂದಿಕ್ಕಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
