Asianet Suvarna News Asianet Suvarna News

ಯಾವುದಕ್ಕಾಗಿ ಚೀನಾ ಅಡ್ಡಗಾಲು ಹಾಕಿತ್ತೋ ಭಾರತಕ್ಕೆ ಅದನ್ನೇ ನೀಡಿದ ಅಮೆರಿಕ!

ಭಾರತಕ್ಕೆ ಎಸ್​ಟಿಎ-1ಸವಲತ್ತು ನೀಡಿದ ಅಮೆರಿಕ! ಚೀನಾಗೆ ಸೆಡ್ಡು ಹೊಡೆಯಲು ಅಮೆರಿಕ ರಣತಂತ್ರ! ಎಸ್​ಟಿಎ-1 ಸವಲತ್ತು ಪಡೆದ ಏಷ್ಯಾದ ಮೂರನೇ ರಾಷ್ಟ್ರ! ದ.ಕೊರಿಯಾ, ಜಪಾನ್‌ಗೆ ನೀಡಿದ್ದ ವಿಶೇಷ ಸವಲತ್ತು! ಅತ್ಯಾಧುನಿಕ ರಕ್ಷಣಾ ಉಪಕರಣ ಮಾರಾಟಕ್ಕೆ ಅಸ್ತು

India third Asian nation to get STA-1 status from US
Author
Bengaluru, First Published Aug 4, 2018, 3:59 PM IST

ವಾಷಿಂಗ್ಟನ್(ಆ.4): ಅಮೆರಿಕ ಏಷ್ಯಾದ ತನ್ನ ಮಿತ್ರ ರಾಷ್ಟ್ರಗಳಾದ ದಕ್ಷಿಣ ಕೊರಿಯಾ ಹಾಗೂ ಜಪಾನ್​ಗೆ ನೀಡಿದ ವಿಶೇಷ ಸಹಕಾರವನ್ನು ಭಾರತಕ್ಕೂ ವಿಸ್ತರಿಸಿದೆ. ದ.ಕೊರಿಯಾ ಮತ್ತು ಜಪಾನ್‌ಗೆ ನೀಡಿದ ಎಸ್​ಟಿಎ-1ಸವಲತ್ತನ್ನು ಭಾರತಕ್ಕೂ ನೀಡಲಾಗಿದೆ.

ಈ ಮೂಲಕ ಅಮರಿಕದಿಂದ ಎಸ್​ಟಿಎ-1 ಸವಲತ್ತು ಪಡೆದ ಏಷ್ಯಾದ ಮೂರನೇ ರಾಷ್ಟ್ರ ಎಂಬ ಹೆಗ್ಗಳಿಕಗೆ ಭಾರತ ಪಾತ್ರವಾಗಿದೆ.ಅಮೆರಿಕ ಸರ್ಕಾರ ಭಾರತಕ್ಕೆ ಎಸ್​ಟಿಎ-1 ಗೆ ಅನುಮತಿ ನೀಡಿ ನೋಟಿಫಿಕೇಷನ್​ ಹೊರಡಿಸಿದೆ. ಈ ಮೂಲಕ ದಕ್ಷಿಣ ಏಷ್ಯಾದಲ್ಲಿ ಚೀನಾ ಪ್ರಾಬಲ್ಯಕ್ಕೆ ತಡೆಯೊಡ್ಡಲು ದೊಡ್ಡಣ್ಣ ವ್ಯವಸ್ಥಿತವಾದ ಚಕ್ರವ್ಯೂಹ ಹೆಣೆದಿದೆ.   

ಅತ್ಯಾಧುನಿಕ  ತಂತ್ರಜ್ಞಾನದ ಉಪಕರಣ ಹಾಗೂ ಇತರೆ ರಕ್ಷಣಾ ವಸ್ತುಗಳನ್ನು ಖರೀದಿಸಲು ಈ  ಸ್ಟ್ಯಾಟರ್ಜಿಕ್​ ಟ್ರೇಡ್​ ಆಥರೈಜೇಷನ್​ ಅನುಮತಿಯಿಂದ ಸಾಧ್ಯವಾಗಲಿದೆ.  ಅದರಲ್ಲೂ ವಿಶೇಷವಾಗಿ ಭಾರತಕ್ಕೆ ಬಾಹ್ಯಾಕಾಶ  ರಕ್ಷಣಾ ಕ್ಷೇತ್ರದ ಉಪಕರಣಗಳ ಮಾರಾಟಕ್ಕೆ ಹಾದಿ ಮಾಡಿಕೊಟ್ಟಿದೆ.

ಈ ಕುರಿತು ಟ್ರಂಪ್​ ಅಡ್ಮಿನಿಸ್ಟ್ರೇಷನ್​  ಫೇಡರಲ್​ ನೋಟಿಫಿಕೇಷನ್ ಹೊರಡಿಸಿದ್ದು, ಅಚ್ಚರಿಯ ವಿಷಯ ಅಂದರೆ ಭಾರತ ಇನ್ನು ಎನ್​ಎಸ್​ಜಿಯ ಸದಸ್ಯತ್ವ ಪಡೆಯದೇ ಈ ಸವಲತ್ತು ಪಡೆಯುತ್ತಿರುವ ಏಕೈಕ ರಾಷ್ಟ್ರವಾಗಿದೆ.  ಅಮೆರಿಕ ಎನ್​ಎಸ್​ಜಿ ಸದಸ್ಯತ್ವ ಪಡೆದ  ರಾಷ್ಟ್ರಗಳಿಗೆ ಮಾತ್ರ ಉನ್ನತ ತಂತ್ರಜ್ಞಾನದ ಉಪಕರಣಗಳನ್ನ ಮಾರಾಟ ಮಾಡುತ್ತದೆ. 

ಎಸ್​ಟಿಎ-1 ಸವಲತ್ತು ಪಡೆಯಲು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ನಿಯಮ (MTCR),  ವಾಸ್ಸೆನರ್ ಅರೇಂಜ್ಮೆಂಟ್ (WA) ಆಸ್ಟ್ರೇಲಿಯಾ ಗ್ರೂಪ್​ (AG) ಮತ್ತು ಎನ್​ಎಸ್​ಜಿ ಈ ನಾಲ್ಕರ ಸದಸ್ಯತ್ವ ಪಡೆದಿರಬೇಕಾಗುತ್ತದೆ. ಇದರಿಂದ ಭಾರತ ವಿನಾಯಿತಿ ಪಡೆದಿದೆ.  ಈ ಮೂಲಕ ಭಾರತ ನಾಟೋ ಸಮಾನವಾದ ಸ್ಥಾನವನ್ನ ಪಡೆದಿದೆ.  

ಈ ಮೊದಲು ಎನ್​ಎಸ್​ಜಿ ಸದಸ್ಯತ್ವ ಪಡೆಯಲು ಭಾರತ ಭಾರಿ ಪ್ರಯತ್ನ ಮಾಡಿತ್ತು. ಅಮೆರಿಕ ಸೇರಿದಂತೆ ಇತರ ಎಲ್ಲ ರಾಷ್ಟ್ರಗಳು ಭಾರತದ ನೆರವಿಗೆ ನಿಂತಿದ್ದವು. ಆದರೆ, ಚೀನಾ ತನ್ನ ವೀಟೋ ಬಳಸಿ ಭಾರತಕ್ಕೆ ಎನ್​ಎಸ್​ಜಿ ಸದಸ್ಯತ್ವ ಪಡೆಯಲು ಅಡ್ಡಗಾಲು ಹಾಕಿತ್ತು. ಹೀಗಾಗಿಯೇ ಅಮೆರಿಕ ಭಾರತಕ್ಕೆ  STA-1 ಪಟ್ಟಿಯಲ್ಲಿ ಸ್ಥಾನ ನೀಡಿ ಅನುಮತಿಸಿದೆ.  ಈ ಮೂಲಕ ಚೀನಾಕ್ಕೆ ಭರ್ಜರಿ ಟಾಂಗ್ ನೀಡಿದೆ.

Follow Us:
Download App:
  • android
  • ios