Asianet Suvarna News Asianet Suvarna News

ಭಾರತ-ಶ್ರೀಲಂಕಾ ಗೆ ಸಂಬಂಧಿಸಿದ ರಹಸ್ಯ ಕಡತ ನಾಶ

ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಮತ್ತು ಶ್ರೀಲಂಕಾಗೆ ಸಂಬಂಧಿಸಿದ ಸುಮಾರು 195 ರಹಸ್ಯ ಕಡತಗಳನ್ನು ಬ್ರಿಟನ್ ನ ವಿದೇಶಿ ಮತ್ತು ಕಾಮನವೆಲ್ತ್ ಕಚೇರಿ ನಾಶಪಡಿಸಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧ ಮತ್ತು ಎಲ್‌ಟಿಟಿಇ  ಕಾರ್ಯಚಟುವಟಿಕೆ ಕುರಿತ ರಹಸ್ಯ ಮಾಹಿತಿಗಳು ಈ ಕಡತದಲ್ಲಿದ್ದವು ಎನ್ನಲಾಗಿದೆ.

India, Sri Lanka Documents Destroyed In Britain

ಲಂಡನ್[ಮೇ.28): ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ ಮತ್ತು ಶ್ರೀಲಂಕಾಗೆ ಸಂಬಂಧಿಸಿದ ಸುಮಾರು 195 ರಹಸ್ಯ ಕಡತಗಳನ್ನು ಬ್ರಿಟನ್ ನ ವಿದೇಶಿ ಮತ್ತು ಕಾಮನವೆಲ್ತ್ ಕಚೇರಿ ನಾಶಪಡಿಸಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧ ಮತ್ತು ಎಲ್‌ಟಿಟಿಇ  ಕಾರ್ಯಚಟುವಟಿಕೆ ಕುರಿತ ರಹಸ್ಯ ಮಾಹಿತಿಗಳು ಈ ಕಡತದಲ್ಲಿದ್ದವು ಎನ್ನಲಾಗಿದೆ.

ಉಭಯ ದೇಶಗಳ ನಡುವೆ ನಡೆದ ಶಾಂತಿ ಒಪ್ಪಂದ ಮತ್ತು ನಂತರ ನಡೆದ ಘಟನಾವಳಿಗಳ ಮಾಹಿತಿಯನ್ನು ಸಂಗ್ರಹಿಸಲಾಗಿತ್ತು. ಆದರೆ ಬ್ರಿಟನ್ ಮಾಹಿತಿ ಸಂಗ್ರಹಣಾ ನೀತಿ ಅನುಸಾರವಾಗಿ ಈ 195ಕ್ಕೂ ಹೆಚ್ಚು ಕಡತಗಳನ್ನು ನಾಶಪಡಿಸಲಾಗಿದೆ.

ಆದರೆ ಬ್ರಿಟನ್ ನ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅಂತರಾಷ್ಟ್ರೀಯ ಸಂಬಂಧಗಳ ಕುರಿತ ಅಧ್ಯಯನಕ್ಕೆ ಅನುಕೂಲವಾಗಿದ್ದ ಈ ಕಡತಗಳನ್ನು ನಾಶಪಡಿಸಿದ್ದು ಸರಿಯಲ್ಲ ಎಂದು ಸಂಶೋಧಕರು ಕಿಡಿಕಾರಿದ್ದಾರೆ. 1978 ಮತ್ತು1980 ರಲ್ಲಿ ಎಲ್ ಟಿಟಿಇ ಸಂಭಾವ್ಯ ದಾಳಿ ಕುರಿತು ಬ್ರಿಟನ್ ನ ಗುಪ್ತಚರ ಇಲಾಖೆ ಶ್ರೀಲಂಕಾಗೆ ಮಾಹಿತಿ ನೀಡಿದ್ದು, 1979 ಮತ್ತು 1980ರ ಭಾರತ-ಶ್ರೀಲಂಕಾ ನಡುವಿನ ರಾಜತಾಂತ್ರಿಕ ಸಂಬಂಧಗಳ ಕುರಿತಾದ ಕಡತಗಳನ್ನು ನಾಶಪಡಿಸಲಾಗಿದೆ.

Follow Us:
Download App:
  • android
  • ios