ಜಗತ್ತಿನ ಅತ್ಯಂತ ಸ್ಪರ್ಧಾತ್ಮಕ ಆರ್ಥಿಕತೆಯಲ್ಲಿ ಭಾರತ 1 ಸ್ಥಾನ ಕುಸಿತ ಕಾಣುವ ಮೂಲಕ 40ನೇ ಸ್ಥಾನಕ್ಕೆ ಇಳಿದಿದೆ. ಜಾಗತಿಕ ಆರ್ಥಿಕ ವೇದಿಕೆಯ ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತ ಕಳೆದ ವರ್ಷಕ್ಕಿಂತ ಒಂದು ಸ್ಥಾನ ಇಳಿಕೆಯಾಗಿದೆ.

ನವದೆಹಲಿ: ಜಗತ್ತಿನ ಅತ್ಯಂತ ಸ್ಪರ್ಧಾತ್ಮಕ ಆರ್ಥಿಕತೆಯಲ್ಲಿ ಭಾರತ 1 ಸ್ಥಾನ ಕುಸಿತ ಕಾಣುವ ಮೂಲಕ 40ನೇ ಸ್ಥಾನಕ್ಕೆ ಇಳಿದಿದೆ. ಜಾಗತಿಕ ಆರ್ಥಿಕ ವೇದಿಕೆಯ ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ಭಾರತ ಕಳೆದ ವರ್ಷಕ್ಕಿಂತ ಒಂದು ಸ್ಥಾನ ಇಳಿಕೆಯಾಗಿದೆ.

ಪಟ್ಟಿಯಲ್ಲಿ ಸ್ವಿಜರ್‌ಲೆಂಡ್ ಮೊದಲನೇ ಸ್ಥಾನದಲ್ಲಿದೆ. 137 ರಾಷ್ಟ್ರಗಳ ಈ ಪಟ್ಟಿಯಲ್ಲಿ ಅಮೆರಿಕ ಎರಡನೇ ಮತ್ತು ಸಿಂಗಾಪುರ ಮೂರನೇ ಸ್ಥಾನದಲ್ಲಿವೆ. ನೆರೆಯ ಚೀನಾ 27ನೇ ಸ್ಥಾನದಲ್ಲಿದೆ.

ಸೂಚ್ಯಂಕದಲ್ಲಿ ಭಾರತ ಮೂಲಭೂತ ಸೌಕರ್ಯಕ್ಕೆ 66ನೇ ರ್ಯಾಂಕ್, ಉನ್ನತ ಶಿಕ್ಷಣ ಮತ್ತು ತರಬೇತಿಗೆ 75ನೇ ರ್ಯಾಂಕ್, ತಾಂತ್ರಿಕ ಸಿದ್ಧತೆಗೆ 107ನೇ ರ್ಯಾಂಕ್ ಪಡೆದಿದೆ.

ಭಾರತದಲ್ಲಿ ಉದ್ಯಮ ನಡೆಸಲು ಭ್ರಷ್ಟಾಚಾರ ಇನ್ನೂ ಅತಿ ದೊಡ್ಡ ಸಮಸ್ಯೆ ಎಂದು ಖಾಸಗಿ ವಲಯ ಅಭಿಪ್ರಾಯ ಪಡುತ್ತದೆ ಎಂದು ವರದಿ ತಿಳಿಸಿದೆ.

ನೆರೆಯ ಇತರ ರಾಷ್ಟ್ರಗಳಾದ ಭೂತಾನ್ 85ನೇ, ನೇಪಾಳ 88ನೇ, ಬಾಂಗ್ಲಾದೇಶ 99ನೇ ಮತ್ತು ಪಾಕಿಸ್ತಾನ 115ನೇ ರ್ಯಾಂಕ್’ನಲ್ಲಿ ಗುರುತಿಸಲ್ಪಟ್ಟಿವೆ.