ನವದೆಹಲಿ[ಜೂ.13]: ಜಾಗತಿಕ ಶಾಂತಿ ಸೂಚ್ಯಂಕವೊಂದು ಬಿಡುಗಡೆಯಾಗಿದ್ದು, 163 ದೇಶಗಳ ಪೈಕಿ ಭಾರತ 141ನೇ ಸ್ಥಾನ ಪಡೆದಿದೆ. ಕಳೆದ ವರ್ಷ ಭಾರತ 136ನೇ ಸ್ಥಾನದಲ್ಲಿತ್ತು.

ಆಸ್ಪ್ರೇಲಿಯಾದ ಇನ್ಸಿಟಿಟ್ಯೂಟ್‌ ಫಾರ್‌ ಎಕನಾಮಿಕ್ಸ್‌ ಆ್ಯಂಡ್‌ ಪೀಸ್‌ ಈ ಪಟ್ಟಿಬಿಡುಗಡೆ ಮಾಡಿದೆ. ಐರ್ಲೆಂಡ್‌, ನ್ಯೂಜಿಲೆಂಡ್‌, ಆಸ್ಟ್ರೀಯಾ, ಪೋರ್ಚುಗಲ್‌, ಡೆನ್ಮಾರ್ಕ್ ಟಾಪ್‌ 5 ಸ್ಥಾನ ಪಡೆದುಕೊಂಡಿವೆ. ಶಾಂತಿಯುತ ಜೀವನ, ಸಾಮಾಜಿಕ ಸುರಕ್ಷತೆ ಮತ್ತು ಭದ್ರತೆಯ ಅಂಶಗಳ ಆಧರಿಸಿ ಪಟ್ಟಿತಯಾರಿಸಲಾಗಿದೆ.

ಪಟ್ಟಿಯಲ್ಲಿ ಕಡೆಯ ಸ್ಥಾನ ಆಷ್ಘಾನಿಸ್ತಾನಕ್ಕೆ ಸಿಕ್ಕಿದೆ. ಶ್ರೀಲಂಕಾ 72, ನೇಪಾಳ 76, ಬಾಂಗ್ಲಾ 101, ಪಾಕಿಸ್ತಾನ 153ನೇ ಸ್ಥಾನ ಪಡೆದುಕೊಂಡಿವೆ.