Asianet Suvarna News Asianet Suvarna News

ಸರ್ಜಿಕಲ್ ಸ್ಟ್ರೈಕ್ ಫೇಕ್: ಪಾಕಿಸ್ತಾನ

2016ರಲ್ಲಿ ಪಾಕಿಸ್ತಾನದ ಗಡಿಯಲ್ಲಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್‌ ದಾಳಿ ಕುರಿತು ಬ್ರಿಟನ್‌ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಗಳೆಲ್ಲವೂ ಸುಳ್ಳು ಮತ್ತು ಆಧಾರ ರಹಿತ ಎಂದು ಪಾಕಿಸ್ತಾನ ಆರೋಪಿಸಿದೆ. ಅಲ್ಲದೆ, ಹಲವು ಬಾರಿ ಸುಳ್ಳುಗಳನ್ನು ಹೇಳುವ ಮೂಲಕ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂಬುದಾಗಿಯೂ ಪಾಕಿಸ್ತಾನ ಹೇಳಿದೆ.

India's surgical strike is fake: Pakistan

ಇಸ್ಲಾಮಾಬಾದ್‌: 2016ರಲ್ಲಿ ಪಾಕಿಸ್ತಾನದ ಗಡಿಯಲ್ಲಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್‌ ದಾಳಿ ಕುರಿತು ಬ್ರಿಟನ್‌ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಗಳೆಲ್ಲವೂ ಸುಳ್ಳು ಮತ್ತು ಆಧಾರ ರಹಿತ ಎಂದು ಪಾಕಿಸ್ತಾನ ಆರೋಪಿಸಿದೆ. ಅಲ್ಲದೆ, ಹಲವು ಬಾರಿ ಸುಳ್ಳುಗಳನ್ನು ಹೇಳುವ ಮೂಲಕ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂಬುದಾಗಿಯೂ ಪಾಕಿಸ್ತಾನ ಹೇಳಿದೆ.

ಲಂಡನ್‌ನಲ್ಲಿ ಬುಧವಾರ ಆಯೋಜನೆಯಾಗಿದ್ದ ‘ ಭಾರತ್‌ ಕಿ ಬಾತ್‌ ಸಬ್‌ಕೆ ಸಾಥ್‌’ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದ ಮೋದಿ ಅವರು, ‘ಪಾಕಿಸ್ತಾನದ ಗಡಿಯಲ್ಲಿನ ಸರ್ಜಿಕಲ್‌ ದಾಳಿಯ ಕುರಿತು ಮಾಧ್ಯಮ ಮತ್ತು ಜನತೆಗೆ ತಿಳಿಸುವ ಮುನ್ನ ಪಾಕಿಸ್ತಾನಕ್ಕೆ ತಿಳಿಸಲು ಹಲವು ಬಾರಿ ಪ್ರಯತ್ನ ಮಾಡಿದ್ದೆವು. ಆದರೆ, ನಮ್ಮ ಕರೆ ಸ್ವೀಕರಿಸಲು ಪಾಕಿಸ್ತಾನ ಭೀತಿಗೊಂಡಿತ್ತು,’ ಎಂದಿದ್ದರು. ಈ ಬಗ್ಗೆ ಗುರುವಾರ ಪ್ರತಿಕ್ರಿಯಿಸಿರುವ ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್‌ ಫೈಸಲ್‌, ‘ಭಾರತದ ಸರ್ಜಿಕಲ್‌ ದಾಳಿಯೇ ಶುದ್ಧ ಸುಳ್ಳು ಮತ್ತು ಆಧಾರರಹಿತ. ಒಂದು ಸುಳ್ಳನ್ನು ಪದೇ ಪದೇ ಹೇಳುವ ಮೂಲಕ ಅದನ್ನು ಸತ್ಯ ಎಂದು ಬಿಂಬಿಸಲು ಸಾಧ್ಯವಿಲ್ಲ,’ ಎಂದು ಹೇಳಿದ್ದಾರೆ.

ಭಾರತಕ್ಕೆ ಪಾಕಿಸ್ತಾನ ಉಗ್ರರ ರವಾನಿಸುತ್ತಿದೆ ಎಂಬ ಮೋದಿ ಹೇಳಿಕೆ ವಿರುದ್ಧವೂ ಪಾಕಿಸ್ತಾನ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ, ಭಾರತವೇ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಪಾಕ್‌ ದೂರಿದೆ.

Follow Us:
Download App:
  • android
  • ios