Asianet Suvarna News Asianet Suvarna News

ದೇಶದಲ್ಲೇ ಮೊದಲ ಬಾರಿಗೆ ಇಂತದ್ದೊಂದು ಶಸ್ತ್ರಚಿಕಿತ್ಸೆ ಯಶಸ್ವಿ

ಕೃತಕ ತಲೆಬುರುಡೆ ಅಳವಡಿಸುವ ಶಸ್ತ್ರ ಚಿಕಿತ್ಸೆ ಯಶಸ್ವಿ |  ದೇಶದಲ್ಲಿ ಇಂತದ್ದೊಂದು ಆಪರೇಶನ್ ನಡೆದಿರುವುದು ಇದೇ ಮೊದಲು |  ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕಿಗೆ ತಲೆ ಬುರುಡೆ ಶಸ್ತ್ರಚಿಕಿತ್ಸೆ 

India's first skull implant surgery  succeed in Pune
Author
Bengaluru, First Published Oct 11, 2018, 10:49 AM IST
  • Facebook
  • Twitter
  • Whatsapp

ಪುಣೆ (ಅ. 11): ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆ ವೇಳೆ ಶೇ.60 ರಷ್ಟು ತಲೆಬುರುಡೆಯನ್ನು ಕಳೆದುಕೊಂಡಿದ್ದ ೪ ವರ್ಷದ ಬಾಲಕಿಗೆ ಕೃತಕ ತಲೆಬುರುಡೆ ಅಳವಡಿಸುವ ಮೂಲಕ ಪುಣೆಯ ವೈದ್ಯರು ಸಾಧನೆ ಮಾಡಿದ್ದಾರೆ.

ಇಂತಹ ಶಸ್ತ್ರ ಚಿಕಿತ್ಸೆ ದೇಶದಲ್ಲಿ ನಡೆದಿರುವುದು ಇದೇ ಮೊದಲು ಎನ್ನಲಾಗಿದೆ. 2017 ರ ಮೇ 31 ಕ್ಕೆ ಸಂಭವಿಸಿದ ಅಪಘಾತದಲ್ಲಿ ಬಾಲಕಿಗೆ ಗಂಭೀರ ಗಾಯವಾಗಿತ್ತು. ಆಕೆಯ ತಲೆಬುರುಡೆ ಮೆದುಳನ್ನೇ ಸರಿಸಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ತಲೆಬುರುಡೆ ತೆಗೆದಿದ್ದರು. ಆ ಜಾಗಕ್ಕೆ ಈಗ ಅಮೆರಿಕ ಮೂಲದ ಕಂಪನಿ ತಯಾರಿಸಿರುವ ಪಾಲಿಎಥಿಲೀನ್ ಮೂಳೆ ಅಳವಡಿಸಿದ್ದಾರೆ. ಆ ಬಾಲಕಿಯನ್ನು 2018 ರ ಮೇ 18 ಕ್ಕೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಸದ್ಯ ಆಕೆ ಶಾಲೆಗೆ ಹೋಗುತ್ತಿದ್ದು, ಸ್ನೇಹಿತರ ಜತೆ ಆಟವಾಡಿಕೊಂಡು ಎಲ್ಲ ಮಕ್ಕಳಂತೆಯೇ ಇದ್ದಾಳೆ ಎಂದು ತಾಯಿ ತಿಳಿಸಿದ್ದಾರೆ. ಬಾಲಕಿಯ ತಲೆಬುರುಡೆ 14 ವರ್ಷದವರೆಗೂ ಬೆಳೆಯಲಿದೆ. ಈ ಕೃತಕ ತಲೆಬುರುಡೆ ಅದಕ್ಕೆ ಅವಕಾಶ ಮಾಡಿಕೊಡಲಿದೆ. ನಿಧಾನವಾಗಿ ಬಾಲಕಿ ನೈಜ ತಲೆಬುರುಡೆಯನ್ನೇ ಹೊಂದುತ್ತಾಳೆ ಎಂದು ವೈದ್ಯರು ತಿಳಿಸಿದ್ದಾರೆ. 

Follow Us:
Download App:
  • android
  • ios