Asianet Suvarna News Asianet Suvarna News

ಶಾಂತಿಯುತ ದೇಶಗಳ ಪೈಕಿ 4 ಸ್ಥಾನ ಇಳಿಕೆ ಕಂಡ ಭಾರತ

ಶಾಂತಿಯುತ ದೇಶಗಳ ಪೈಕಿ ಭಾರತ ತನ್ನ ಸ್ಥಿತಿಯನ್ನ ಉತ್ತಮ ಪಡಿಸಿಕೊಂಡಿದೆ. 163 ದೇಶಗಳ ಪೈಕಿ ಶಾಂತಿಯುತ ದೇಶಗಳಲ್ಲಿ ಭಾರತ ಯಾವ ಸ್ಥಾನದಲ್ಲಿದೆ. ಈ ಕುತೂಹಲಕ್ಕೆ ಇಲ್ಲಿದೆ ಉತ್ತರ.

India ranks 137th on Global Peace Index 2018

ಲಂಡನ್(ಜೂನ್.5): ವಿಶ್ವ ಶಾಂತಿಯುತ ದೇಶಗಳ ಪಟ್ಟಿ ಬಿಡುಗಡೆ ಗೊಂಡಿದೆ. ಆಸ್ಟ್ರೇಲಿಯಾ ಥಿಂಕ್ ಟ್ಯಾಂಕ್ ನಡೆಸಿದ ಸರ್ವೆ ಪ್ರಕಾರ 163 ದೇಶಗಳ ಪೈಕಿ ಭಾರತ 137ನೇ ಸ್ಥಾನ ಪಡೆದುಕೊಂಡಿದೆ. ಕ್ರೈಮ್, ಹಿಂಸಾಚಾರ, ನಿಷೇದಾಜ್ಞೆ ಹೇರಿಕೆ ಮುಂತಾದ ಮಾನದಂಡಗಳನ್ನ ಇಟ್ಟುಕೊಂಡು ನಡೆಸಿದ ಸಮೀಕ್ಷೆಯಲ್ಲಿ ಭಾರತ ತನ್ನ ಸ್ಥಿತಿಯನ್ನ ಉತ್ತಮ ಪಡಿಸಿಕೊಂಡಿದೆ.

ಶಾಂತಿಯುತ  ದೇಶಗಳ ಪೈಕಿ ಈ ಹಿಂದೆ 141ನೇ ಸ್ಥಾನದಲ್ಲಿದ್ದ ಭಾರತ ಇದೀಗ 137ನೇ ಸ್ಥಾನ ಪಡೆದುಕೊಂಡಿದೆ. ಈ ಬಾರಿಯೂ ಮೊದಲ ಸ್ಥಾನ ಐಸ್‌ಲೆಂಡ್ ದೇಶದ ಪಾಲಾಗಿದೆ. ನ್ಯೂಜಿಲೆಂಡ್, ಪೋರ್ಚುಗಲ್, ಆಸ್ಟ್ರೀಯಾ ಹಾಗೂ ಡೆನ್ಮಾರ್ಕ್ ದೇಶಗಳು ಟಾಪ್ ಫೈವ್ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದೆ. 

ಶಾಂತಿಯುತ ದೇಶದ ಸ್ಥಾನಗಳ ಪೈಕಿ ಸಿರಿಯಾ ಕೊನೆಯ ಸ್ಥಾನ ಪಡೆದುಕೊಂಡಿದೆ. ಗರಿಷ್ಠ ಹಿಂಸಾಚಾರ, ಸಾವಿಗೆ ಗುರಿಯಾಗಿರುವ ಸಿರಿಯಾ ಅಂತಿಮ ಸ್ಥಾನ ಪಡೆದ ಕುಖ್ಯಾತಿಗೆ ಪಾತ್ರವಾಗಿದೆ. ಇದರೊಂದಿಗೆ ದಕ್ಷಿಣ ಸುಡಾನ್, ಆಫ್ಘಾನಿಸ್ತಾನ, ಇರಾಕ್ ಹಾಗೂ ಸೋಮಾಲಿಯಾ ಅಂತಿಮ ಸ್ಥಾನದಲ್ಲಿದೆ.


 

Follow Us:
Download App:
  • android
  • ios